ಕಲಬುರಗಿ: ನಗರದ ಶಹಬಜಾರ ಕಡಗಂಚಿ ಮಠದಲ್ಲಿ ಮಾನವಧರ್ಮದ ಆದರ್ಶ ಮೌಲ್ಯಗಳು ಸಾರುತ್ತಿರುವ ನೆಟ್ಟಿನಲ್ಲಿ ಸಂಸ್ಥಾಪಿಸಿಗೊಂಡ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಕಲಬುರ್ಗಿ ಜಿಲ್ಲಾ ಘಟಕದ ಪುನಶ್ಚೇತನ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನಿಧ್ಯದಲ್ಲಿ ಸಮಾಲೋಚನೆ ಮಾಡಿ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ಶಾಖಪುರ ತಪೋವನದ ಡಾ. ಸಿದ್ದರಾಮ ಶಿವಾಚಾರ್ಯರು ಸ್ವಾಮಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಪಾಳ ಮಠದ ಡಾ. ಗುರುಮೂರ್ತಿ ಶಿವಾಚಾರ್ಯರು ಆಯ್ಕೆಗೊಂಡಿರುತ್ತಾರೆ ಗೌರವ ಅಧ್ಯಕ್ಷರಾಗಿ ಕಡಗಂಚಿ ಶಾಂತಲಿಂಗೇಶ್ವರ ಮಠದ ವೀರಭದ್ರ ಶಿವಾಚಾರ್ಯರಿಗೆ ಮತ್ತು ಆಯ್ಕೆಯಾಗಿರುವ ಪದಾಧಿಕಾರಿ ಎಲ್ಲಾ ಸ್ವಾಮೀಜಿಗಳಿಗೆ ಭಕ್ತಿಪೂರ್ವಕ ಗೌರವವನ್ನು ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ್ ರಾಜ್ಯ ಸಮಿತಿಯ ನಾಗನಹಳ್ಳಿ ಶ್ರೀಧರ್ ಉಪಾಧ್ಯಕ್ಷರಾದ ಕಲ್ಯಾಣ್ ರಾವ್ ಪಾಟೀಲ್ ಕಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸುನಿಲ್ ಮಹಾಗಾವ್ಕರ್ , ಕಾರ್ಯದರ್ಶಿ ಮಹೇಶ ಚಂದ್ರ ಪಾಟೀಲ್ ಕಣ್ಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಮೇಶ್ವರ ಯಳಮೇಲಿ , ಸಹ ಸಂಘಟನಾ ಕಾರ್ಯದರ್ಶಿ ಆನಂದ ಕಣಸೊರ, ಜಿಲ್ಲಾ ಸಂಚಾಲಕರಾದ ಗುರುರಾಜ್ ಅಂಬಾಡಿ, ಸುನಿಲ್ ಕೋಳಕೂರ, ಸತೀಶ್ ಮಾಹೂರ್, ಅವಿನಾಶ್ ಅರಳಿ ಮತ್ತು ಸದಸ್ಯರಾದ ಗುರುರಾಜ್ ಸೊಂಟನೂರು,ಶಿವಕುಮಾರ್ ಸಾವಳಗಿ, ಮಲ್ಲಿಕಾರ್ಜುನ್ ಕೊಂಡೇದ ಮತ್ತು ವೇದಿಕೆ ಸದಸ್ಯರು ಪದಾಧಿಕಾರಿಗಳು ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.