ಕಲಬುರಗಿ: ನಗರದ ಹೊರವಲದ ಉದನೂರು ರಸ್ತೆಯಲ್ಲಿ ಯುವಕನೋರ್ವನನ್ಮು ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶ್ರೀನಿವಾಸ ಲಿಂಬಾಜಿ ಚವ್ಹಾಣ (27) ಕೊಲೆಯಾದ ಯುವಕ, ಶ್ರೀನಿವಾಸ ಉದನೂರು ತಾಂಡ ನಿವಾಸಿ ಎಂದು ತಿಳಿದು ಬಂದಿದ್ದು, ಅನೈತಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪ್ರಥಮ ಮಾಹಿತಿ ಆಧರಿಸಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಕೊಲೆಗೈದ ಆರೋಪಿಗಳಿಗೆ ಬಂಧನಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.