ಶಹಾಬಾದ:ಇಲ್ಲಿನ ನಗರಸಭೆಗೆ ನೂತನ ನಾಮನಿರ್ದೇಶನ ಸದಸ್ಯರನ್ನಾಗಿ ಐವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ನಗರದ ಶಿವಶರಣಪ್ಪ ಈರಣ್ಣ ವಸ್ತ್ರದ್,ಭಾಗಿರಥಿ ಶ್ರೀಶೈಲ ಗುನ್ನಾಪೂರ, ಶಿವಾಜಿ ಶೆಟ್ಟಪ್ಪಾ, ದತ್ತಾತ್ರೇಯ ಭರತ ಫಂಡ್ ಹಾಗೂ ಮಂಜುನಾಥ ನಾಗಣ್ಣ ಅವರನ್ನು ರಾಜ್ಯಪಾಲರ ಆಜ್ಞಾನುಸಾರ ಅವರ ಹೆಸರಿನಲ್ಲಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎ.ವಿಜಯಕುಮಾರ ಅವರು ನಗರಸಭೆಯ ನಾಮನಿದರ್ೇಶನ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಮಾಡಿದ್ದಾರೆ.