ಯಾದಗಿರಿ: ಕರ್ನಾಟಕ ರಾಜ್ಯ ಪಿಂಜಾರ ಸಂಘಟನೆಗಳ ಎಲ್ಲಾ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರು ಸಮಾಜದ ಅಭಿವೃದ್ಧಿಗಾಗಿ ಸ್ಪಂದಿಸದೀರುವುದು ಕಂಡು ಬರುತ್ತಿದ್ದು, ಕೇವಲ ರಾಜಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡು ಸಮುದಾಯವನ್ನು ಬಲಿಪಶು ಮಾಡುತ್ತಿದ್ದಿರಿ ಎಂದು ಸಮುದಾಯದ ಯುವ ಮುಖಂಡ ಹುಸೇನಸಾಬ ಎಂ ಗಾದಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಸಂಘದ ನಡೆಗೆ ರೋಷಿ ಹೋಗಿದ್ದೇವೆ ಸಂಘಟನೆಯ ಮೂಲಕ ಹೋರಾಟ ಮಾಡಿ ಸಮಾಜಕ್ಕೆ ನ್ಯಾಯ ಕೋಡಿಸುತ್ತಿರೆಂದು ನಂಬಿಕೆ ಇಟ್ಟಿದ್ದು ಸುಳ್ಳಾಗಿದೆ ಎಂದು ದುರಿದ್ದಾರೆ.
ರಾಜ್ಯದಲ್ಲಿ ಹಲವು ನಿಗಮ ಮಂಡಳಿಗಳ ಮೂಲಕ ಸಮಾಜಗಳಿಗೆ ಗೌರವ ಸಿಗುತ್ತಿದೆ. ಆದರೆ ನಮ್ಮ ಸಮಾಜಕ್ಕೆ ಗೌರವ ತಂದುಕೊಡಲು ಅಂತಿಮವಾಗಿ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇನ್ನುವರೆಗೂ ನಮ್ಮ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ ಕಾರಣ ಎಲ್ಲಾ ರಾಜ್ಯಾಧ್ಯಕ್ಷರಗಳು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.