Monday, July 15, 2024
ಮನೆಬಿಸಿ ಬಿಸಿ ಸುದ್ದಿಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಸಚಿವ ಸ್ಥಾನಕ್ಕೆ ಆಗ್ರಹ

ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಸಚಿವ ಸ್ಥಾನಕ್ಕೆ ಆಗ್ರಹ

ಕಲಬುರಗಿ: ಕಳೆದ ವರ್ಷ ಜುಲೈ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಯಡಿಯೂರಪ್ಪನವರ ನೇತೃತ್ವದ ಸರ್ಕಾರದಲ್ಲಿ ಅತ್ಯಂತ  ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಂತ್ರಿಮಂಡದಲ್ಲಿ ಸಿಗಬೇಕಾದ  ಪ್ರಾತಿನಿದಿತ್ವ ಸಿಗದೆ  ನಿರ್ಲಕ್ಷವಾಗಿರುವದರಿಂದ  ಬರುವ ಮಂತ್ರಿ ಮಂಡಲದ ವಿಸ್ತಿರಣದಲ್ಲಿ  ಇಲ್ಲವೆ ಪುನರ್ಚನೆಯ ಸಂದರ್ಭದಲ್ಲಿ  ನಮ್ಮ ಪ್ರದೇಶಕ್ಕೆ ನೀಡಬೇಕಾದ ನಮ್ಮ ಹಕ್ಕಿನ ಮಂತ್ರಿ ಸ್ಥಾನಗಳು ನೀಡಿ  ಪ್ರಾದೇಶಿಕ ಸಮತೋಲನೆ ಕಾಪಾಡಲು ಮತ್ತು  ಸಂವಿಧಾನ ಬದ್ಧ ವಿಶೇಷ ಸ್ಥಾನಮಾನಕ್ಕೆ ಪೂರಕವಾಗಿ  ಸ್ಪಂದಿಸಿ ಬದ್ಧತೆ ಪ್ರದರ್ಶಿಸಿಸಬೇಕೆಂದು ಹೈದ್ರಾಬಾದ ಕರ್ನಾಟಕ ಜನಪರ ಸಂಫರ್ಷ ಸಮಿತಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದೆ.

ರಾಜ್ಯದ ಶೇಕಡಾ 23ರಷ್ಟು ಬೂ ಪ್ರದೇಶ ಮತ್ತು  ಶೇ 20ರಷ್ಟು ಜನಸಂಖ್ಯೆ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶ ರಾಜ್ಯದಲ್ಲಿ  ಅತ್ಯಂತ ಹಿಂದುಳಿದಿರುವ ಕಾರಣದಿಂದಲೇ ವಿಶೇಷ ಸ್ಥಾನಮಾನ ನೀಡಲಾಗಿದೆ. ಸುಮಾರು 1ಕೋಟಿ 30 ಲಕ್ಷ ಜನಸಂಖ್ಯೆ ಇರುವ ನಮ್ಮ ಪ್ರದೇಶಕ್ಕೆ ಮಂತ್ರಿಮಂಡದಲ್ಲಿ 8 ಮಂತ್ರಿ ಸ್ಥಾನಗಳು ಸಿಗಲೇಬೇಕು ಆದರೆ ಈಗ ಪ್ರಾತಿನಿದಿತ್ವ ಸಿಕ್ಕಿರುವದು ಕೇವಲ ಎರಡು ಸಚಿವ ಸ್ಥಾನಗಳು ಮಾತ್ರ.

ಕಲಬುರಗಿ, ಯಾದಗೀರ, ರಾಯಚೂರ, ಕೊಪ್ಪಳ ಜಿಲ್ಲೆಗಳಿಗೆ ಸಚಿವ ಸ್ಥಾನವೇ ಸಿಕ್ಕಿಲ್ಲ. ನಮ್ಮ ಪ್ರದೇಶದಲ್ಲಿ ಮಂತ್ರಿ  ಸ್ಥಾನಕ್ಕೆ  ಅರ್ಹರಿರುವ ಎಲ್ಲಾ ವರ್ಗದ ಶಾಸಕರು ಇದ್ದಾರೆ, ಹೀಗಿರುವಾಗ ಬರುವ ಮಂತ್ರಿ ಮಂಡಲದ ವಿಸ್ತರಣೆ ಇಲ್ಲವೆ ಪುನರ್ಚನೆಯ ಸಂದರ್ಭದಲ್ಲಿ ನಮ್ಮ ಹಕ್ಕಿನ ಸಚಿವ ಸ್ಥಾನಗಳು ನೀಡಿ ನಮ್ಮ ಪ್ರದೇಶಕ್ಕೆ ನ್ಯಾಯ ಒದಗಿಸಬೇಕು. ಸರ್ಕಾರ ಹೀಗೆ ಮಾಡದೆ ನಮ್ಮ ಪ್ರದೇಶಕ್ಕೆ ಮತ್ತೆ  ನಿರ್ಲಕ್ಷಿಸಿದರೆ, ಸರ್ಕಾರ ನಮ್ಮ ಭಾಗಕ್ಕೆ  ರಾಜಾರೋಷವಾಗಿ ಮಲತಾಯಿ ಧೋರಣೆ ಮಾಡುವದು ಸ್ಪಷ್ಟವಾಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕದ ಶಾಸಕರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸಂಘಟಿತ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಸಮಿತಿ ಒತ್ತಾಯಿಸುತ್ತದೆ. ಈ ವಿಷಯಕ್ಕೆ ನಮ್ಮ ಪ್ರದೇಶದ ಶಾಸಕರು ಸಾಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಬರುವ ದಿನಗಳಲ್ಲಿ ಅವರ ಮನೆಗಳ ಮುಂದೆ ಸತ್ಯಾಗ್ರಹ ನಡೆಸುವದು  ಅನಿವಾರ್ಯ ವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular