ಅಖೀಲ ಭಾರತೀಯ ಸಾರ್ವತ್ರಿಕ ಮುಷ್ಕರದಲ್ಲಿ ಆಶಾ ಕಾರ್ಯಕರ್ತೆಯರು ಪಾಲ್ಗೊಳ್ಳಿ: ಸೋಮಶೇಖರ

0
50

ಸುರಪುರ: ನಗರದ ಸಾಮಥ್ಯ ಸೌಧದಲ್ಲಿ ಎಐಯುಟಿಯುಸಿ ಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ)ದ ವತಿಯಿಂದ ಇದೇ ನ.೨೬ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ದ ಅಂಗವಾಗಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಭೆಯನ್ನು ಉದ್ದೇಶಿಸಿ ಸಂಘದ ರಾಜ್ಯ ಅಧ್ಯಕ್ಷರಾದ ಕೆ ಸೋಮಶೇಖರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ಮಂಡಿಸಿರುವ ಕಾಯ್ದೆಗಳು ಅತ್ಯಂತ ಜನ ವಿರೋಧಿ, ಕಾರ್ಮಿಕ ವಿರೋಧಿ ಹಾಗು ರೈತ ವಿರೋಧಿಯಾಗಿವೆ. ಕಾರ್ಮಿಕರು ಹಲವು ವರ್ಷಗಳ ಹೋರಾಟದ ಮೂಲಕ ಗಳಿಸಿಕೊಂಡಿದ್ದ ಪ್ರಮುಖ ೪೪ ಕಾರ್ಮಿಕ ಕಾನೂನುಗಳನ್ನು ಈಗ ತಿದ್ದುಪಡಿಗೊಳಿಸುವ ಮೂಲಕ, ಕಾಯ್ದೆಗಳನ್ನು ದುರ್ಬಲಗೊಳಿಸಿ, ಕಾರ್ಪೊರೇಟ್ ಮಾಲೀಕರಿಗೆ ಗುಲಾಮರಾಗುವಂತೆ ಮಾಡಿದೆ. ದೇಶದ ಜನತೆಯ ತೆರಿಗೆಯ ಹಣದಿಂದ ಕಟ್ಟಿ, ಕಾರ್ಮಿಕರ ಶ್ರಮದಿಂದ ಬೆಳೆದು ನಿಂತಿರುವ ಸಾರ್ವಜನಿಕ ಕೇತ್ರದ ಉದ್ದಿಮೇಗಳನ್ನು ಖಾಸಗೀಕರಣಗೊಳಿಸುವ ದುಡಿಯುವ ಜನತೆಯ ಮೇಲೆ ಗಧಾಪ್ರಹಾರಮಾಡಿದೆ.

Contact Your\'s Advertisement; 9902492681

ಆದ್ದರಿಂದ ಕಾರ್ಮಿಕರು ಇಂತ ಜನವಿರೋಧಿ, ಕಾರ್ಮಿಕ ವಿರೋಧಿ ಕ್ರಮಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಮುಂದಾಗುವಂತೆ, ಇದೇ ೨೬ ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಕಾರ್ಮಿಕರಿಗೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ೨೬ರ ಮುಷ್ಕರದ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಆಶಾ ಸಂಘದ ಜಿಲ್ಲಾ ಮುಖಂಡರಾದ ರಾಮಲಿಂಗಪ್ಪ ಬಿ.ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಶಾಂತಮ್ಮ, ನೀಲಮ್ಮ, ಪ್ರಭಾವತಿ, ಶಿವಮೊಗ್ಗಮ್ಮ, ಮರೆಮ್ಮ, ಈರಮ್ಮ, ಯಂಕಮ್ಮ, ಅಂಜುಳಾದೇವಿ, ರೇಣುಕಾ, ಶಶಿಕಲಾ, ಬಸ್ಸಮ್ಮ, ರಾಜೇಶ್ವರಿ, ರಂಜಾನಬೀ, ಚಾಂದಬೀ ಸೇರಿದಂತೆ ತಾಲೂಕಿನ ವಿವಿಧ ಪಿಎಚ್‌ಸಿ ಯ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ, ಕಾರ್ಮಿಕ ವಿರೋಧಿ ಮತ್ತು ರೈತವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಡೆಯುವ ನ.೨೬ ರ ಅಖಿಲ ಬಾರತ ಸಾರ್ವತ್ರಿಕ ಮುಷ್ಕರದಲ್ಲಿ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರು ಸಕ್ರೀಯವಾಗಿ ಭಾಗವಹಿಸುವುದಾಗಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here