ದರೋಡೆಗೆ ಹೊಂಚು ಹಾಕುತ್ತಿದ್ದ ಐವರ ಬಂಧನ

0
44

ಕಲಬುರಗಿ: ಮಧ್ಯಾಹ್ನದ ವೇಳೆಯಲ್ಲಿ ನಗರದ ಇಂಡಸ್ಟ್ರೀಯಲ್‌ ಗೇಟ್ ಹತ್ತಿರ ಐವರು ದರೋಡೆಕೋರರು ದರೋಡೆಗೆ ಹೊಂಚು ಹಾಕುತ್ತಿದ ಆರೋಪದಲ್ಲಿ ನಗರ ರೋಜಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ನಿವಾಸಿಗಳಾದ ಆರೀಫ್‌ ಶೇಖ (22), ನಿವಾಸಿ ಅನ್ವರ ಷಾ (27), ಮಹ್ಮದ ಸೊಹೆಲ್‌ (24) ಮಹ್ಮದ್ ಅಶಫಾಕ್ (30) ಹಾಗೂ ರಫೀಕ್ ಷಾ (27) ಬಂಥಿತ ಆರೋಪಿಗಳು.

Contact Your\'s Advertisement; 9902492681

ಇಂದು ಮಧ್ಯಾಹ್ನ ರೋಜಾ ಪೊಲೀಸ್ ಠಾಣೆಯ ಪಿ. ಅಸ್ಲಮ್ ಬಾಷಾ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಅನುಮಾನ್ಸಪದವಾಗಿ ಐವರು ಆರೋಪಿಗಳು ಹಗ್ಗ, ಬಡಿಗೆ,ಕಾಗದದಲ್ಲಿ ಖಾರದ ಪುಡಿ, ಕಬ್ಬಿಣ ರಾಡ್, ಹಾಗೂ ಎಲ್ಲರ ಹತ್ತಿರ ಕಪ್ಪುಬಣ್ಣದ ಬಟ್ಟೆ ತುಕಡಿಗಳ ಹೊಂದಿರುವ ಕೊರುತು ಮಾಹಿತಿ ಆಧಾರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವೇಳೆಯಲ್ಲಿ ಆರೋಪಿಗಳಿಂದ ದರೋಡೆಗೆ ಬಳಸಲು ಬಳಸುವ ವಸ್ತುಗಳು ಸೇರಿ ಮೂರು ಬೈಕ್ ಗಳು ವಶಪಡಿಸಿಕೊಂಡಿದ್ದು, ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿನೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here