ಸುರಪುರ ನಗರದಲ್ಲಿ ವಿದ್ಯೂತ್ ವಿಭಾಗೀಯ ಕಚೇರಿ ಆರಂಭಿಸಲು ಎಲ್‌ಜೆಪಿ ಮನವಿ

0
30

ಸುರಪುರ: ಇಂದು ಯಾವುದೇ ವಿದ್ಯೂತ್ ಸರಬರಾಜು ಅಥವಾ ಬೇರಾವುದೆ ವಿದ್ಯೂತ್ ವಿತರಣೆಗೆ ಸಂಬಂಧಿಸಿದ ಕೆಲಸಗಳಿದ್ದರೆ ಯಾದಗಿರಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸುರಪುರ ತಾಲೂಕು ಜಿಲ್ಲೆಯಲ್ಲಿಯೇ ದೊಡ್ಡ ತಾಲೂಕಾಗಿದ್ದು ಇಲ್ಲಿ ನೂರೈವತ್ತಕ್ಕು ಹೆಚ್ಚು ಹಳ್ಳಿಗಳಿವೆ ಅಲ್ಲದೆ ನಾರಾಯಣಪುರ ಭಾಗದ ಜನರು ಯಾದಗಿರಿಗೆ ಹೋಗಬೇಕಾದರೆ ಸುಮಾರು ೧೫೦ ಕಿಲೋ ಮೀಟರ್‌ಗಿಂತ ದೂರಾಗಲಿದೆ ಇದರಿಂದ ಜನರು ಯಾದಗಿರಿಗೆ ಹೋಗಿ ಬರಲು ತೊಂದರೆಯಾಗಲಿದೆ,ಆದ್ದರಿಂದ ಸುರಪುರ ನಗರದಲ್ಲಿಯೇ ವಿದ್ಯೂತ್ ವಿಭಾಗೀಯ ಕಚೇರಿಯನ್ನು ಆರಂಭಿಸುವಂತೆ ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು ಸುರಪುರ ನಗರದಲ್ಲಿ ವಿದ್ಯೂತ್ ವಿಭಾಗೀಯ ಕಚೇರಿ ಆರಂಭಿಸುವುದರಿಂದ ರೈತರಿಗೆ ಮತ್ತು ಸಾರ್ವಜನಿಕರಿಗು ತುಂಬಾ ಅನುಕೂಲವಾಗಲಿದೆ.ಆದ್ದರಿಂದ ಈ ನಮ್ಮ ಬೇಡಿಕೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಸಿರಸ್ತೆದಾರ ಸೋಮನಾಥ ನಾಯಕ ಅವರ ಮೂಲಕ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ದುರ್ಗಪ್ಪ ಬಡಿಗೇರ ನಾಗರಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here