ಕಲಬುರಗಿ: ಕೇಂದ್ರ ಸರಕಾರ ಬ್ಯಾಂಕ್ ವಲಯಗಳನ್ನು ಖಾಸಗೀಕರ ಮಾಡುವ ಮೂಲಕ ಸಾರ್ವಜನಿಕ ವಲಯವನ್ನು ನಾಶಮಾಡಲು ಹೊರಟ್ಟಿರುವ ವಿರುದ್ಧ ಆಲ್ ಇಂಡಿಯಾ ಬ್ಯಾಂಕ್ ಇಂಪ್ಲಾಯಿ ಅಸೋಯೆಷನ್ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ನಗರದ ಸಿಂಡಿಕೇಟ್ ಮುಖ್ಯ ಶಾಖೆಯ ಹತ್ತಿರ ಪ್ರತಿಭಟನೆ ನಡೆಸಿದ ಬ್ಯಾಂಕ್ ನೌಕರರು, ಸಾರ್ವಜನಿಕ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ ಬ್ಯಾಂಕ್ ನೌಕರರು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಬಲಪಡಿಸಿಸಬೇಕೆಂದು ಆಗ್ರಹಿಸಿದರು.
ಬ್ಯಾಂಕ್ ಕಲ್ಲಿ ಸಾಲ ಪಡೆದವರ ವಿರುದ್ಧ ಕಠಿಣ ಕ್ರಮ, ಬೃಹತ್ ಕಾರ್ಪೊರೇಟ್ ಎನ್‌ಪಿಎಗಳನ್ನು ಮರುಪಡೆಯಿರಿ, ಬ್ಯಾಂಕಿನ ಠೇವಣಿ ಬಡ್ಡಿದರ ಹೆಚ್ಚಿಸಿ, ನಿಯಮಿತ ಬ್ಯಾಂಕಿಂಗ್ ಹೊರಗುತ್ತಿಗೆ ನಿಲ್ಲಿಸಿ, ಬ್ಯಾಂಕ್ ಸಿಬ್ಬಂದಿಗಳ ಹೊಸ ಪಿಂಚಣಿ ಯೋಜನೆಗೆ ಸೇರಿಸಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾ ನಿರತ ಸಿಬ್ಬಂದಿಗಳು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತೀಯ ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ನಾರಾಯಣ್ ರೂಗಿ, ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ್, ಖಜಾಂಚಿ ರವಿಶಂಕರ್ ಹುನಗುಂಡ್, ಕಾರ್ಯದರ್ಶಿ ವಿನಯ್, ಉಪಾಧ್ಯಕ್ಷರಾ ಮಹ್ಮದ್ ಅನ್ಸಾರಿ, ಪ್ರೀತಿ ರೂಪಾ, ರಾಧಿಕಾ ರಾಥೋಡ್, ಅಶ್ವಿನಿ ಪ್ರಣಡ್ನ್ಯಾ, ವೆಂಕಟೇಶ್ ಗಂಗರಾಮ್, ರವಿ ಸುಖದೇವ್, ಶಿವಕುಮಾರ್ ಕಟ್ಕೆ, ಕಿರಣ್ ಸಕ್ರೆ, ರವೀಂದ್ರ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.