ಕಲಬುರಗಿ: ಕನ್ನಡ ಭಾಷೆ ಸರ್ವಶ್ರೇಷ್ಠ ಜೀವನ ವಿಧಾನದ ಜೊತೆಗೆ ಪ್ರೀತಿಯನ್ನು ಹಂಚಿಕೊಳ್ಳುವುದು ಆಗಿದೆ. ಆಸ್ಪದ ಕೊಡದೆ ಎಲ್ಲಾ ಭಾಷೆಗ ಗೌರವಿಸಬೇಕು ಎಂದು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಹೇಳಿದ್ದಾರು. ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ಉತ್ತರವಲಯದ ವತಿಯಿಂದ ಇಂದು ನಗರದ ಅಲ್ತಮಶ್ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ “ಕನ್ನಡ ಭಾಷೆ ಮತ್ತು ಬಹು ಭಾಷಾ ಸಂಸ್ಕೃತಿ” ಉಪನ್ಯಾಸಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ಕನ್ನಡ ಭಾಷಯನ್ನು ಪ್ರೀತಿಸಿ ಬೆಳೆಸುವ ಕೆಲಸ ಮಾಡಬೇಕು. ಕನ್ನಡಕ್ಕೆ ಸಾವಿರಾರು ವರ್ಷದ ಇತಿಹಾಸವಿದ್ದು ಇದೊಂದು ಶ್ರೀಮಂತ ಭಾಷಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಹಿರಿಯ ಪತ್ರಕರ್ತ ಮೋಯಿನುದ್ದಿನ್ ಪಾಷಾ ಅನೇಕ ಸಾಹಿತಿಗಳು ವಿದ್ವಾಂಸರು ಕನ್ನಡ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಯಾರೂ ಮರೆಯಬಾರದು.ಅಲ್ಪ ಸಂಖ್ಯಾತರು ರಾಜ್ಯದ ಆಡಳಿತ ಭಾಷ ಕನ್ನಡ ಕಡ್ಡಾಯವಾಗಿ ಕಲಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಉತ್ತರ ವಲಯದ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಲಖೇಡದ ರಾಷ್ಟ್ರಕೂಟರ ಇತಿಹಾಸದಲ್ಲಿ ಕನ್ನಡ ಭಾಷಗೆ ಹೆಚ್ಚು ಮಹತ್ವದು,ಪಾರಂಪರಿಕ ಭಾಷೆಯಾಗಿದೆ.ಇತಿಹಾಸ ಅವಲೋಕಿಸಿದಾಗ ನಿಜವಾದ ಕನ್ನಡ ರಾಜಧಾನಿ ಕಲಬುರಗಿ ಆಗಿದೆ.ಕನ್ನಡಿಗರು ಕನ್ನಡತನವನ್ನು ಎಂದಿಗೂ ಮರೆಯಬಾರದು ಎಂದರು.
ಇನ್ನೋಬ್ಬ ಮುಖ್ಯ ಅತಿಥಿಯಾಗಿ ಮಾನಾಡಿದ ಹಿರಿಯ ಪತ್ರಕರ್ತ ಡಾ.ಮಾಜೀದ ದಾಗಿ ನಮ್ಮ ರಾಷ್ಟ್ರದಲ್ಲಿ ಬಹು ಭಾಷೆಗಳಿದ್ದರು ಕನ್ನಡ ಸರಳವಾಗಿದೆ.ಕನ್ನಡ ಭಾಷೆ ಕೇವಲ ಆಚರಣೆಯಾಗಿದೆ ಪ್ರತಿಯೊಬ್ಬರು ಅಭಿಮಾನ ಬೆಳಸಿಕೊಳ್ಳಬೇಕು ಎಂದರು.
ಕಸಾಪ ಉತ್ತರ ವಲಯದ ಗೌರವ ಕಾರ್ಯದರ್ಶಿ ಜಿ.ಜಿ.ವಣಿಕ್ಯಾಳ ಪ್ರಸ್ತಾವಿಕ ಮಾತನಾಡಿ ನಿರೂಪಿಸಿದರು. ಕಸಾಪ ಉತ್ತರ ವಲಯದ ಉಪಾಧ್ಯಕ್ಷ ಅಲಿ ಸಾಜೀದ ಅಲಿ ರಂಜೋಳ್ವಿ, ಯುವ ಮುಖಂಡ ಶಕೀಲ ಅಂಗಡಿ ಅತಿಥಿಗಳಾಗಿ ವೇದಿಕೆ ಮೇಲೆ ಇದ್ದರು.ಉತ್ತರ ವಲಯದ ಗೌರವ ಕಾರ್ಯದರ್ಶಿ ಸ್ವಾಗತಿಸಿದರು. ಸಂಘಸಂಸ್ಥೆಗಳ ಪ್ರತಿನಿಧಿ ಬಾಬಾ ಫಕ್ರುದ್ದಿನ್ ವಂದಿಸಿದರು. ಪ್ರಶಾಂತ ತಂಬೂರಿ, ವಿಜಯಕುಮಾರ ಚೇಂಗಟಾ ಇದ್ದರು.