ಶಹಾಬಾದ:ನಗರದ ಬಾಲಕರ ಪ್ರೌಢಶಾಲಾ ಆವರಣದಲ್ಲಿರುವ ನಿರುಪಯುಕ್ತ ಹಳೆ ಕೋಣೆಗಳನ್ನು ತೆಗೆದು ಸುಮಾರು 170 ಲಕ್ಷ ರೂ.ಅನುದಾನದಲ್ಲಿ ಹೊಸದಾಗಿ ಹತ್ತು ಶಾಲಾ ಕೋಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಶನಿವಾರ ನಗರದ ಬಾಲಕರ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಹತ್ತು ಕೋಣೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಈಗಾಗಲೇ ಕೋಣೆಗಳು ನಿರುಪಯುಕ್ತವಾಗಿದ್ದು, ಬೀಳು ಹಂತದಲ್ಲಿದ್ದವು.ಅದನ್ನು ಮನಗಂಡು ನಬಾರ್ಡನ ಆರಐಡಿಎಫ್ 25 ನೇ ಯೋಜನೆಯಡಿ ಸುಮಾರು 170 ಲಕ್ಷ ರೂ. ಅನುದಾನದಲ್ಲಿ ಉತ್ತಮ ಕೋಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.ಇದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅನುಕೂಲವಾಗಲಿದೆ ಎಂದರು.ಅಲ್ಲದೇ ಗುತ್ತಿಗೆದಾರ ಉತ್ತಮ ಗುಣಮಟ್ಟದಲ್ಲಿ ಯಾರ ದೂರುಬರದ ಹಾಗೇ ನಿರ್ಮಾಣ ಮಾಡಬೇಕು.ಸಂಬಂಧಪಟ್ಟ ಅಧಿಕಾರಿಗಳು ಗುಣಮಟ್ಟಕ್ಕೆ ಯಾವುದೇ ರೀತಿ ಹೊಂದಾಣಿಕೆಯಾಗದೇ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ತಿಳಿಸಿದರು.
ತಹಸೀಲ್ದಾರ ಸುರೇಶ ವರ್ಮಾ, ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನಾಗರಾಜ ಮೇಲಗಿರಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗಿರಥಿ ಗುನ್ನಾಪೂರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ,ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ತಾಪಂ ಅಧ್ಯಕ್ಷೆ ಸಂಗೀತಾ ಕಾರೊಳ್ಳಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಚವ್ಹಾಣ, ನಗರಸಭೆಯ ಅಧ್ಯಕ್ಷೆ ಅಂಜಲಿ ಕಂಬಾನೂರ, ಲೋಕೋಪಯೋಗಿ ಇಲಾಖೆಯ ಜೆಇ ಜಗನ್ನಾಥ, ಕನಕಪ್ಪ ದಂಡಗುಲಕರ್, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ,ನಿಂಗಣ್ಣ ಹುಳಗೋಳಕರ್,ಬಸವರಾಜ ಮದ್ರಕಿ, ಬಸವರಾಜ ಬಿರಾದಾರ,ರಾಜು ಚವ್ಹಾಣ ಕಲಬುರಗಿ, ಭೀಮಯ್ಯ ಗುತ್ತೆದಾರ,ರವಿ ರಾಠೋಡ,ಶಿವುಗೌಡ, ಅಣ್ಣಪ್ಪ ದಸ್ತಾಪೂರ, ಶರಣು ವಸ್ತ್ರದ್, ಜಯಶ್ರೀ ಸೂಡಿ, ಶಶಿಕಲಾ ಸಜ್ಜನ್,ಪಾರ್ವತಿ ಪವಾರ, ವಿರೇಶ ಬಂದಳ್ಳಿ,ಸಂಜಯ ವಿಠಕರ್, ರಾಜೇಶ ಯನಗುಂಟಿಕರ್ ದುರ್ಗಪ್ಪ ಪವಾರ,ಶ್ರೀಧರ ಜೋಷಿ ಸೇರಿದಂತೆ ಅನೇಕರು ಇದ್ದರು.