ಕಲಬುರಗಿ: ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಜಾರಿ ಆಗಿರುವ 371 ಜೆ ವಿಶೇಷ ಸ್ಥಾನಮಾನದಿಂದ ಬಳ್ಳಾರಿ ಜಿಲ್ಲೆಯನ್ನು ತೆಗೆದು ಹಾಕಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಳ್ಳಾರಿ ಜಿಲ್ಲೆಯವರಾದ ಸಚಿವ ಶ್ರೀರಾಮುಲು ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಕ್ಕೆ 371ಜೆ ವಿಶೇಷ ಸ್ಥಾನಮಾನ ನೀಡುವಂತೆ ಹೇಳಿದ್ದಾರೆ.ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸಂವಿಧಾನದ 371ಜೆ ಕಲಂಗೆ ತಿದ್ದುಪಡಿ ಮಾಡಿ ಜಾರಿಗೊಳಿಸಲಾಗಿದೆ.ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಲ್ಲದೆ ಇರುವ ಮೊಳಕಾಲ್ಮೂರು ತಾಲ್ಲೂಕನ್ನು 371ಜೆಯಲ್ಲಿ ಸೇರಿಸುವುದು ದೂರದ ಮಾತು.ಇನ್ನು ಬಳ್ಳಾರಿ ವಿಷಯಕ್ಕೆ ಬಂದರೆ ಬಳ್ಳಾರಿ ಕೂಡ ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರುವುದಿಲ್ಲ.
317ನೇ ಕಲಂ ಹೋರಾಟ ಮಾಡುವಾಗ ಬಳ್ಳಾರಿ ಜಿಲ್ಲೆಯವರು ಹೋರಾಟದಲ್ಲಿ ತೊಡಗಿಸಿಕೊಂಡಿಲ್ಲ.ಹೋರಾಟ ಮಾಡದೇ 371ನೇ ಜೆ ಸ್ಥಾನಮಾನದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ.ಮೇಲಿಂದ ಬಳ್ಳಾರಿ ಜಿಲ್ಲೆಯವರಾದ ಸಚಿವ ಶ್ರೀರಾಮುಲು ಈಗ ಮೊಳಕಾಲ್ಮೂರು ಹೆಸರು ಹೇಳಿದ್ದಾರೆ.ನಾಳೆ ಮತ್ತೋಂದು ಹೇಳಬಹುದು.ಇದರಿಂದ ನಿಜವಾಗಿ ನಾವು ಪಡೆಯಬಹುದಾದ ಸವಲತ್ತುಗಳನ್ನು ಇನ್ನಾರೋ ಪಾಲಿಗೆ ಹೋದರೆ ನಮ್ಮವರ ಗತಿ ಏನು? ನಮಗಾಗುವ ಅನ್ಯಾಯಕ್ಕೆ ಸರಕಾರವೆ ಹೊಣೆ ಯಾಗುತ್ತದೆ.ಮುಖ್ಯಮಂತ್ರಿಗಳು ಇದನ್ನು ತಿರಸ್ಕಾರ ಮಾಡಬೇಕು.
ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಸೇರಿದ್ದು ಅಲ್ಲ.ರಾಜಕೀಯ ಕುತಂತ್ರದಿಂದ ಬಳ್ಳಾರಿ ಜಿಲ್ಲೆಯನ್ನು 371 ಜೆಯಲ್ಲಿ ಸೇರಿಸಿದ್ದಾರೆ.ಇತಿಹಾಸ ಅವಲೋಕಿಸಿದಾಗ ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಬೀದರ, ಕಲಬುರಗಿ, ಯಾದಗಿರಿ, ಕೊಪ್ಪಳ ಜಿಲ್ಲೆಗಳು ಮಾತ್ರ ಒಳಪಡುತ್ತವೆ.ತಮ್ಮ ಕುತಂತ್ರ ಬುದ್ಧಿ ಉಪಯೋಗಿಸಿ ಬಳ್ಳಾರಿ ಜಿಲ್ಲೆಯ ರಾಜಕೀಯ ನಾಯಕರು ತಮ್ಮ ಜಿಲ್ಲೆ ಸೇರಿಸಿದಲ್ಲದೆ ಇನ್ನೋಂದು ಜಿಲ್ಲೆಗೆ ವಿಶೇಷ ಸ್ಥಾನಮಾನ ಸವಲತ್ತುಗಳನ್ನು ಕೊಡಿಸುವ ಹುನ್ನಾರ ನಡೆಸುತ್ತಿದ್ದಾರೆ.
ಈ ಹಿಂದೆ ಸಚಿವ ಶ್ರೀರಾಮುಲು ಗದಗ ಜಿಲ್ಲೆ 371 ರಲ್ಲಿ ಸೇರಿಸಲು ಮುಂದಾಗಿದ್ದರು.ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಅದನ್ನು ಕೈ ಬಿಟ್ಟಿದ್ದರು.ಕೂಡಲೇ ಬಳ್ಳಾರಿ ಜಿಲ್ಲೆ 371ಜೆ ವಿಶೇಷ ಸ್ಥಾನಮಾನ ದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.