ಕಾರ್ಮಿಕರಿಗಾಗಿ ಜೀವನ ಮುಡುಪಾಗಿಟ್ಟವರು ಫೆಡರಿಕ ಎಂಗಲ್ಸ-ರಾಮಣ್ಣ

0
54

ಶಹಾಬಾದ:ನಗರದ ಎಸಯುಸಿಐ (ಕಮ್ಯುನಿಸ್ಟ) ಪಕ್ಷದ ವತಿಯಿಂದ ಕಾರ್ಮಿಕ ವರ್ಗದ ಮಹಾನ್ ನಾಯಕ ಫೆಡರಿಕ ಎಂಗಲ್ಸ ರವರ 200 ನೇ ಜನ್ಮದಿನಾಚರಣೆಯನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಸಯುಸಿಐ ಕಮುನಿಷ್ಟ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ.ಎಸ್. ಇಬಾಹಿಂಪೂರ ಶ್ರಮವೇ ಸಂಪತ್ತಿನ ಸೃಷ್ಠಿಗೆ ಮೂಲಕಾರಣ ಎಂದು ವೈಜ್ಞಾನಿಕವಾಗಿ ಹೇಳಿದಂತೆ ತೋರಿಸಕೊಟ್ಟವರು ಕಾರ್ಮಿಕ ವರ್ಗದ ಮಹಾನ್ ನಾಯಕ ಫೆಡರಿಕ್ ಎಂಗಲ್ಸ ಎಂದು ಹೇಳಿದರು. ಅವರು ಕಾರ್ಲಮಾರ್ಕ್ಸ ಜತೆ ಕಾರ್ಮಿಕ ವರ್ಗದ ವಿಮುಕ್ತಿಗಾಗಿ ದುಡಿದರು. ಐತಿಹಾಸಿಕ ವಸ್ತುವಾದ , ಕುಟುಂಬ, ಖಾಸಗಿ ಆಸ್ತಿ ಮತ್ತು ರಾಜ್ಯಗಳ ಉಗಮ, ಹಾಗೂ ಕಾರ್ಲಮಾರ್ಕ್ಸ ರವರ ದಾಸ್ ಕ್ಯಾಪಿಟಲ್ ಪ್ರಸಿದ್ಧ ಕೃತಿಯ ಭಾಗ 2-3ನ್ನು ಬರೆದು ಪುಸ್ತಕ ಪೂರ್ಣಗೊಳಿಸಿದರು. ಎಂಗಲ್ಸ ಶ್ರೀಮಂತ ಕುಟುಂಬದಲ್ಲಿ ಜನಸಿದರೂ, ಇಡೀ ಜೀವನ ಮಾತ್ರ ಕಾರ್ಮಿಕ ವರ್ಗದ ಸ್ವತಂತ್ರಕ್ಕಾಗಿ ಮುಡುಪಾಗಿಟ್ಟಿದ್ದರು. ಕಾರ್ಲಮಾರ್ಕ್ಸ ಮತ್ತು ಎಂಗಲ್ಸ ರವರು ಎರಡು ದೇಹ ಒಂದು ಮನಸ್ಸಾಗಿತ್ತು. ಇವರ ವಿಚಾರ ತಿಳಿದುಕೊಂಡು ಭಾರತದಲ್ಲಿ ಸಮಾಜವಾದ ಕ್ರಾಂತಿ ಜರುಗಿಸಲು ಯುವಜನತೆ ಮುಂದೆ ಬರಬೇಕೆಂದು ಹೇಳಿದರು.

Contact Your\'s Advertisement; 9902492681

ಎಸ್ಯುಸಿಐ ಕಾರ್ಯದರ್ಶಿ ಗಣಪತರಾವ್.ಕೆ.ಮಾನೆ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳು ತರುತ್ತಿದ್ದು ಇದರ ವಿರುದ್ಧ ಮಾಕ್ರ್ಸವಾದ ವಿಚಾರದ ಮೇಲೆ ಪ್ರಬಲ ಚಳುವಳಿ ಬೆಳೆಯಬೇಕೆಂದರು. ಪ್ರಸ್ತುತ ಪಂಜಾಬ ರಾಜ್ಯದ ರೈತರ ದೆಹಲಿ ಚಲೋ ಚಳುವಳಿ ಐತಿಹಾಸಿಕ ಹೋರಾಟವಾಗಿ ಹೊರಹೊಮ್ಮುತ್ತಿದ್ದು ಸರಕಾರ ಕೂಡಲೇ ಇವರ ಬೇಡಿಕೆಯನ್ನು
ಈಡೇರಿಸಬೇಕೆಂದರು.

ವೇದಿಕೆ ಮೇಲೆ ಪಕ್ಷದ ಸದಸ್ಯೆ ಗುಂಡಮ್ಮ ಮಡಿವಾಳ ಇದ್ದರು. ಜಗನ್ನಾಥ.ಎಸ್.ಎಚ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿದ್ದು ಚೌಧರಿ,ಶಿವುಕುಮಾರ.ಇ.ಕೆ, ನೀಲಕಂಠ.ಎಮ್.ಹುಲಿ, ತುಳಜರಾಮ.ಎನ್.ಕೆ, ಕಸ್ತೂರಿ ಕುಸಾಳೆ, ರಾಧಿಕ ಚೌಧರಿ, ರಮೇಶ ದೇವಕರ್, ಕಿರಣ್. ಮಾನೆ, ಶ್ರೀನಿವಾಸ ದಂಡಗುಲಕರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here