ಶಹಾಬಾದ: ಹನ್ನೇರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ವಚನ ಸಾಹಿತ್ಯದ ಮೂಲಕ ಜಾಗತಿಕ ಮನ್ನಣೆ ಗಳಿಸಿದರೆ, 16 ನೇ ಶತಮಾನದಲ್ಲಿ ಕನಕದಾಸರು ದಾಸ ಸಾಹಿತ್ಯದ ಮೂಲಕ ವಿಶ್ವಮಾನಸರೆನಿಸಿದ್ದಾರೆ ಎಂದು ಕರ್ನಾಟಕ ಪದವಿ ಕಾಲೇಜಿನ ಪ್ರಾಂಶುಪಾಲ ಪಿ.ಎಸ್.ಕೊಕಟನೂರ್ ಹೇಳಿದರು.
ಅವರು ಗುರುವಾರ ನಗರದ ಕನಕದಾಸರ ವೃತ್ತದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಆಯೋಜಿಸಲಾದ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾಸ ಸಾಹಿತ್ಯದ ಮೂಲಕ ಜೀವನದ ಮೌಲ್ಯಗಳಿಗೆ ಹೊಸ ಅರ್ಥ ನೀಡಿದ ಕನಕದಾಸರು ಜಾತಿ ಮೀರಿ ಬೆಳೆದ ಮಹಾನ್ ಚಿಂತಕರಾಗಿದ್ದರು.ಕನಕದಾಸರ ಆದರ್ಶ, ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು,ಸಮಾಜದ ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಮಾತನಾಡಿ,ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿ ವೈಚಾರಿಕತೆ ಅನಾವರಣಗೊಳಿಸಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ.ಹೀಗಾಗಿ ಕನಕದಾಸರ ಜಯಂತೋತ್ಸವದಲ್ಲಿ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು.ಕನಕದಾಸರನ್ನು ಒಂದು ಜಾತಿಗೆ ಸಿಮೀತಗೊಳಿಸಬಾರದು ಎಂದು ಹೇಳಿದರು.
ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶರಣು ಪಗಲಾಪೂರ, ನಗರಸಭೆ ಸದಸ್ಯ ಡಾ.ಅಹ್ಮದ್ ಪಟೇಲ್, ನಾಗರಾಜ ಕರಣಿಕ್,ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ಕಸಾಪ ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಕರ್, ಮರಲಿಂಗ ಕಮರಡಗಿ,ಸಂಗೊಳ್ಳಿ ರಾಯಣ್ಣ ಜಿಲ್ಲಾಧ್ಯಕ್ಷ ಬಸವರಾಜ ಮದ್ರಕಿ, ಶಿವಾನಂದ ಪೂಜಾರಿ, ಮಾಜಿ ಜಿಪಂ ಸದಸ್ಯ ಮಲ್ಲಿಕಾರ್ಜುನ ಪೂಜಾರಿ,ರಾಜಶೇಖರ ದೇವರಮನಿ, ಶಿವಯೋಗಿ ಕುಂಟನ್, ಸಂತೋಷ ದೊಡ್ಡಮನಿ,ರಾಯಣ್ಣ ಪೂಜಾರಿ,ಸದಾನಂದ ಕುಂಬಾರ, ನಿಂಗಣ್ಣ ಪೂಜಾರಿ ಇತರರು ಇದ್ದರು.ಇತರರು ಇದ್ದರು.
ಇದೇ ಸಂದರ್ಭದಲ್ಲಿ ಕನಕದಾಸರ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅನುದಾನ ಮೀಸಲಾಗಿದ್ದು, ಕೂಡಲೇ ಮೂರ್ತಿ ಪ್ರತಿಷ್ಠಾಪನೆ ಕೆಲಸ ಪ್ರಾರಂಭ ಮಾಡಬೇಕೆಂದು ಕುರುಬ ಸಮಾಜದ ವತಿಯಿಂದ ಪೌರಾಯುಕ್ತರಿಗೆ ಒತ್ತಾಯಿಸಲಾಯಿತು.