ಶಹಾಬಾದ:ನಿಮ್ಮ ಜನಪ್ರನಿಧಿಯಾಗಿರುವ ನಾನು ನಿಮ್ಮ ಸಮಸ್ಯೆಗಳನ್ನು ಮತ್ತು ಮತಕ್ಷೇತ್ರದ ಅಭಿವೃದ್ಧಿ ಮಾಡುವುದು ನನ್ನ ಕರ್ತವ್ಯ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಶುಕ್ರವಾರ ಹಳೆಶಹಾಬಾದನಲ್ಲಿ ನಗರದ ಆಶ್ರಯ ಸಮಿತಿ ಹಾಗೂ ನಗರಸಭೆಯ ನಾಮನಿದರ್ೇಶಿತ ಸದಸ್ಯರು ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದರು.
ಈಗಾಗಲೇ ಮತಕ್ಷೇತ್ರದಲ್ಲಿ ಸಾಕಷ್ಟು ಅನುದಾನವನ್ನು ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೆನೆ.ಅಲ್ಲದೇ ಶಹಾಬಾದನ ರಾಮಘಡ ಆಶ್ರಯ ಕಾಲೋನಿಯಲ್ಲಿ ನೀರಿನ ವ್ಯವಸ್ಥೆ, ಕೊಳವೆ ಬಾವಿಯನ್ನು ಮಾಡಿಸಲಾಗಿದೆ.ನಗರದ ಬಹುತೇಖ ವಾರ್ಡಗಳಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಂಡಿದ್ದೆವೆ.ಬ್ರಿಡ್ಜ ಕಮ್ ಬ್ಯಾರೇಜ್ ನಿರ್ಮಾಣವಾಗಿದೆ.ತೊನಸನಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಸದಸ್ಯದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಸವರ್ಾಂಗೀಣ ಅಭಿವೃದ್ಧಿ ಮಾಡುವುದೇ ನನ್ನ ಗುರಿ ಅಲ್ಲದೇ ಮತಕ್ಷೇತ್ರದ ಜನರು ತಮ್ಮ ಯಾವುದೇ ಸಮಸ್ಯೆಗಳಿದ್ದರೇ, ನನ್ನ ಗಮನಕ್ಕೆ ತಂದರೆ ಅದನ್ನು ಪ್ರಾಮಾಣಿವಾಗಿ ಬಗೆಹರಿಸಲು ಮುಂದಾಗುತ್ತೆನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ಭಾರತೀಯ ಜನತಾ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು.ಈ ಪಕ್ಷದ ಕಾರ್ಯಕರ್ತರಾಗಿರುವುದೇ ನಮ್ಮ ಸುದೈವ. ನಮ್ಮ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಪಕ್ಷ ಗುರುತಿಸಿ ಸ್ಥಾನಮಾನ ನೀಡುತ್ತದೆ.ಅದಕ್ಕಾಗಿ ಪಕ್ಷದ ಸಂಘಟನೆ ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿದರು.
ಬಿಜೆಪಿ ಮುಖಂಡ ಶರಣಪ್ಪ ಹದನೂರ ಮಾತನಾಡಿದರು. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂಗಮೇಶ ವಾಲಿ,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ, ಅಣವೀರ ಇಂಗಿನಶೆಟ್ಟಿ, ಭಾಗಿರಥಿ ಗುನ್ನಾಪೂರ, ಜಯಶ್ರೀ ಸೂಡಿ,ಶಿವುಗೌಡ ಪಾಟೀಲ,ಬೀರಣ್ಣ ಕೊಲ್ಲೂರ್, ಮಲ್ಲಿಕಾರ್ಜುನ ಚಂದನಕೇರಿ, ಗುರುರಾಜ ಮಾಲಿ ಪಾಟೀಲ,ವಿಜಯಕುಮಾರ ಮುತ್ಯಾ ವೇದಿಕೆಯ ಮೇಲಿದ್ದರು.
ನಾಗರಾಜ ಮೇಲಗಿರಿ,ಅರುಣ ಪಟ್ಟಣಕರ್,ಬಸವರಾಜ ಬಿರಾದಾರ,ಚಂದ್ರಕಾಂತ ಗೊಬ್ಬೂರಕರ್,ಕನಕಪ್ಪ ದಂಡಗುಲಕರ್, ಶ್ರೀಶೈಲಪ್ಪ ಬೆಳಮಗಿ, ಶರಣು ಕೌಲಗಿ, ಶರಣಪ್ಪ ಕೊಡದೂರ, ವೈಜನಾಥ ಹುಗ್ಗಿ, ಸುಭಾಷ ಜಾಪೂರ,ಭಗವಾನ ಗುತ್ತೆದಾರ, ಶರಣು ವಸ್ತ್ರದ್,ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ನಿಂಗಣ್ಣ ಹುಳಗೋಳಕರ್, ಭೀಮಯ್ಯ ಗುತ್ತೆದಾರ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಆಶ್ರಯ ಸಮಿತಿ ಸದಸ್ಯ ಶಿವುಗೌಡ ಪಾಟೀಲ ಶಾಸಕ ಬಸವರಾಜ ಮತ್ತಿಮಡು ಅವರನ್ನು ಸನ್ಮಾನಿಸಿದರು.
ವಿಜಯಕುಮಾರ ಪಾರಾ ಪ್ರಾಥರ್ಿಸಿದರು. ಮರಲಿಂಗ ಯಾದಗಿರಿ ನಿರೂಪಿಸಿದರು, ಚಂದ್ರಕಲಾ ಕುಂಬಾರ ಸ್ವಾಗತಿಸಿದರು, ಬಸವರಾಜ ಮದ್ರಕಿ ವಂದಿಸಿದರು.