ಹೊಸ ಭರವಸೆಯತ್ತ ಅನ್ನದಾತ
ವರ್ಷದ ಮೊದಲ ಮಳೆ ಅನ್ನದಾತನ ಮೊಗದಲ್ಲಿ ಕಳೆ
ಹೆಚ್ಚಿದ ಮಳೆ ಹೊಲಗದ್ದೆಗಳಾದವು ನೀರಿನ ಹೊಳೆ
ಉದ್ದು ಹೆಸರು ನೀರುಪಾಲು ಸೂರ್ಯಕಾಂತಿ ಅರಳಲಿಲ್ಲ
ಎಳ್ಳು ಸಜ್ಜೆ ಹಾಳಾಯಿತು ಅಲಸಂದಿ ಬೆಳೆಯಲಿಲ್ಲ
ಹತ್ತಿ ಕಪ್ಪಗಾಯಿತು, ತೊಗರಿ ಹಳದಿಯಾಯಿತು
ಜಾನವಾರುಗಳಿಗೆ ಜಡ್ಡಾಗಿ ಸಾಲದ ಹೊರೆ ಹೆಚ್ಚಿತು
ಕನಸುಗಳು ಹುಸಿಯಾದವು ರಾತ್ರಿ ನಿದ್ದೆ ಮಾಯವಾಯಿತು
ನಂಬಿಕೆ ಇಟ್ಟು ಬಿತ್ತಿದ ಅನ್ನದಾತ ಬದುಕು ಹೈರಾಣಾಯಿತು
ಆದರೂ ಮನದಿ ತುಂಬಿದೆ ಉತ್ತಮ ಬೆಳೆಯ ಭರವಸೆ
ಆಗದಿರಲಿ ಅನ್ನದಾತನ ಬದುಕು ಮತ್ತೆ ಮತ್ತೆ ಹುಸಿ.
ಖಾಜಾ-ಪಟೇಲ್ ಕಲ್ಲಬೇನೂರ (ಭಂಕೂರ)
9902100748