ಕಲಬುರಗಿ: ಕೋವಿಡ್ ಹಿನ್ನೆಲೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿಯ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಸರಳವಾಗಿ ಆಚರಿಸಲಾಗಿದೆ.
ಕಳೆದ ಐದು ದಿನಗಳಿಂದ ನಡೆದ ಜಾತ್ರಾ ಮಹೋತ್ಸವದಲ್ಲಿ ಸರಪಳಿ ಹರಿಯುವುದು ಹಾಗೂ ಬೆಳಿಗ್ಗೆ ಪುರವಂತರು ಅಗ್ಗಿ ತುಳಿಯುವ ಕಾರ್ಯಕ್ರಮಗಳು ಜರುಗಿದ್ದು, ಇಂದು ರಥೋತ್ಸವ ಹಿನ್ನೆಲೆ ಜಸ್ಟ್ ನಾಲ್ಕೂ ಹೆಜ್ಜೆ ಥೇರ್ ಎಳೆಯುವ ಮೂಲಕ ಸಾಂಪ್ರದಾಯಕವಾಗಿ ಆಚರಿಸಲಾಯಿತು.
ರಾಜ್ಯ ಸೇರಿದಂತೆ ನೆರೆ ರಾಜ್ಯಗಳ ನಾನಾ ಬಾಗಗಳಿಂದ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿದ್ರು. ಆದ್ರೆ ಕೋರೊನಾ ಹಾವಳಿ ಕಾರಣ ಪೊಲೀಸರ ಬೀಗಿ ಭದ್ರತೆ ನಡುವೆ ಹಾಗೂ ತಸಿಲ್ದಾರ್ ಉಮಾಕಾಂತ ಹಳ್ಳೆ, ಸಿಪಿಐ ಕೃಷ್ಣಪ್ಪ ಕಲ್ಲದೇವರು, ವಾಡಿ ಪಿಎಸ್ ಐ ವಿಜಯಕುಮಾರ್ ಬಾವಗಿ ಭದ್ರತೆಯಲ್ಲಿ ಕೇವಲ ಗ್ರಾಮಸ್ಥರ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವ ಜರುಗಿತು.