ಜಾನುವಾರು ಕಳ್ಳರ ಬಂಧನ: ಮಿನಿ ಗುಡ್ಸ್ ವಾಹನ ಸೇರಿ 3.91 ಲಕ್ಷ ಮೌಲ್ಯದ ನಗದು ಜಪ್ತಿ

0
36

ಕಲಬುರಗಿ: ಎತ್ತುಗಳನ್ನು ಕದ್ದು ಮರಾಟಾಗಾಗಿ ಸಾಗಿಸುತ್ತಿದ್ದ ಮೂರು ಜಾನುವಾರು ಕಳ್ಳರನ್ನು ನರೋಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ, ಮಿನಿ ಗುಡ್ಸ್ ವಾಹನ ಸೇರಿ 41900 ಸಾವಿರ ನಗರದು ಜಪ್ತಿ ಮಾಡಿದ್ದಾರೆ.

ಠಾಣೆಯ ಪಿ.ಎಸ್.ಐ  ಉದಂಡಪ್ಪ, ಪಿ.ಎಸ್.ಐ  ದೇವಿಂದ್ರಪ್ಪಾ ನೇತೃತ್ವದ ಸಿಬ್ಬಂದಿಗಳಾದ ಶರಣಗೌಡ, ಶಾಂತಕುಮಾರ,  ರಾಮಲಿಂಗ,  ಬಸವರಾಜ, ಸತೀಶ, ಕಾರ್ಯಚರಣೆ ನಡೆಸಿ, ಗುಂಜಬಬಲಾದ ನಿವಾಸಿ ಶ್ರೀಶೈಲ್ ತಿಪ್ಪಣ್ಣಾ ಶಂಕರ ನರೋಣೆಕರ, ಸೇಡಂ ಆಶ್ರಯ ಕಾಲೋನಿಯ ಸಾಗರ ಚಂದು ರಾಠೋಡ್ ಹಾಗೂ ತರಿತಾಂಡಾದ ನಿವಾಸಿ ಮಾರುತಿ ಗೋಪಾಲ ರಾಠೊಡ್ ಎಂಬುವರನ್ನು ಬಂಧಿಸಿದ್ದಾರೆ.

Contact Your\'s Advertisement; 9902492681

ನಿನ್ನೆ ಗುಂಜ ಬಬಲಾದ ಕಡೆಯಿಂದ ಒಂದು ಮಿನಿ ಗೂಡ್ಸ್ ವಾಹನದಲ್ಲಿ ಎತ್ತುಗಳನ್ನು ಸಾಗಾಣಿಕೆ ಆವಾಹನ ಪೊಲೀಸ್ ಜೀಪನ್ನು ಕಂಡು ವೇಗವಾಗಿ ಕಚ್ಚಾ ರೋಡಿಗೆ ತಿರುಗಿಸಿಕೊಂಡು ಹೋಗುತ್ತಿರುವಾಗ ಸಂಶಯ ವ್ಯಕ್ತವಾಗಿ ಬೆನ್ನುಹತ್ತಿ ಹಿಡಿದಾಗ ವಾಹನದಲ್ಲಿ ಎರಡು ಎತ್ತು ಮತ್ತು 3 ಜನರನ್ನು ವಶಪಡಿಸಿಕೊಂಡು ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾಗ, ನರೋಣಾ ಗ್ರಾಮದ ಗುರುಲಿಂಗಪ್ಪಾ ಚನ್ನಬಸಪ್ಪಾ ಹೀರಾ ಇವರಿಗೆ ಸೇರಿದ ಎರಡು ಎತ್ತುಗಳಾಗಿದ್ದು, ಅಂದಾಜು 1.5 ಲಕ್ಷದ ಕಿಮ್ಮತ್ತು ಹೊಂದಿವೆ ಎನ್ನಲಾಗಿದೆ.

ತೀವ್ರ ವಿಚಾರಣೆಯಲ್ಲಿ ಎರಡೂವರೆ ತಿಂಗಳ ಹಿಂದೆ ನಿಂಬರ್ಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮಾಡ್ಯಾಳ ಗ್ರಾಮ ಸೀಮಾಂತರದಲ್ಲಿ ವಿಠಲ್ ಖಂಡೇರಾವ ಮದರಿ ಅವರ ಕಟ್ಟಿರುವ ಸ್ಥಳದಿಂದ ಎರಡು ಎತ್ತುಗಳು ಒಂದು ಆಕಳು ಮತ್ತು ಒಂದು ಹೋರಿಕರ ಕಳ್ಳತನಮಾಡಿ ಮಳಖೇಡ ಸಂತೆಯಲ್ಲಿ ಮಾರಾಟಮಾಡಿ ಬಂದ ಹಣವನ್ನು ಹಂಚಿಕೊಂಡು ಖರ್ಚು ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ.

ಸದರಿ 3 ಜನ ಆರೋಪಿಗಳಿಂದ ಎರಡು ಎತ್ತುಗಳು ಒಂದು ಮಿನಿಗೂಡ್ಸ ವಾಹನದ ಅಂ.ಕಿ ೨,೦೦,೦೦೦/- ಹಾಗೂ ನಗದು ೪೧೯೦೦/- ರೂಪಾಯಿ ಜಪ್ತಿಮಾಡಿದ್ದು ಹೀಗೆ ಒಟ್ಟು ಅಂದಾಜು ಕಿಮ್ಮತ್ತು 3,91,900/- ರೂ ಮೌಲ್ಯದ ಕಳ್ಳತನವಾದ ಮಾಲು ಮತ್ತು ಕಳ್ಳತನಕ್ಕೆ ಬಳಸಿದ ವಾಹನ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here