ಸುರಪುರ: ಕೆಎಸ್ಸಾರ್ಟಿಸಿ ಚಾಲಕರು, ನಿರ್ವಾಹಕರು ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಒತ್ತಾಯಿಸಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ತಾಲೂಕಿನಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.ಯಾದಗಿರಿ ಕೆಎಸ್ಸಾರ್ಟಿಸಿ ಡಿವಿಜನ್‌ನಲ್ಲಿ ಪ್ರತಿಭಟನೆ ಇಲ್ಲ ಎಂದು ಸಾರಿಗೆ ಅಧಿಕಾರಿಗಳು ಹೇಳಿದರೂ ಬಸ್ ಸಂಚಾರದಲ್ಲಿ ತುಂಬ ವ್ಯತ್ಯಯವಾಗಿತ್ತು. ಹಳ್ಳಿಗಳಿಗೆ ಹೋಗಲು ಬಸ್‌ಗಳೇ ಇರಲಿಲ್ಲ. ಇಲ್ಲಿನ ಬಸ್ ಡಿಪೋದಲ್ಲಿ ಬೆರಳಣಿಕೆಯಷ್ಟು ಬಸ್‌ಗಳು ಮಾತ್ರ ಇದ್ದವು. ಅವುಗಳು ಹಳ್ಳಿಗೆ ಹೋಗುವ ಮಾರ್ಗಗಳ ಬಸ್ಸುಗಳಾಗಿರಲಿಲ್ಲ. ಆದ್ದರಿಂದ ಹಳ್ಳಿಗಳಿಗೆ ಹೋಗಲು ಮಕ್ಕಳು, ಮಹಿಳೆಯರು, ವೃದ್ಧರು ಎರಡ್ಮೂರು ಗಂಟೆಯಿಂದ ಕಾಯುತ್ತಿದ್ದರು.
ಬೆಳಗಿನಿಂದಲೂ ಬಸ್‌ಗಳ ಸಂಚಾರ ಆರಂಭವಾಗಿದ್ದವು. ಬೆಂಗಳೂರು ಮತ್ತಿತರೆಡೆಗಳಿಂದ ಸುರಪುರ ಬಸ್ ನಿಲ್ದಾಣದ ಮೂಲಕ ಹಾದ ಹೋದವು. ೧೦ ಗಂಟೆಯ ನಂತರ ಅಂತರ ಮತ್ತು ದೂರದ ಜಿಲ್ಲೆಗಳಿಂದ ಯಾವ ಬಸ್‌ಗಳು ಬರಲಿಲ್ಲ. ಪ್ರಯಾಣಿಕರು ಊರುಗಳಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಅಪಾರ ಪ್ರಮಾಣದಲ್ಲಿ ಜಮಾವಣೆಯಾಗಿದ್ದರು.
ಸುರಪುರದಿಂದ ಶಹಾಪುರ ಮತ್ತು ಯಾದಗಿರಿ ಜಿಲ್ಲೆಗೆ ಬಸ್‌ಗಳು ಮಿತವಾಗಿ ಸಂಚರಿಸಿದವು. ಪ್ರಯಾಣಿಕರು ಮಾತ್ರ ತುಂಬ ವಿರಳವಾಗಿದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಯಾವ ಬಸ್ಸುಗಳು ಬಂದಿರಲಿಲ್ಲ. ಹೀಗಾಗಿ ಬೆಂಗಳೂರು, ಶಿವಮೊಗ್ಗ, ಬಳ್ಳಾರಿ, ಹುಬ್ಬಳ್ಳಿ ಕಡೆಗಳಿಂದ ಯಾವ ಬಸ್ಸುಗಳು ಹೋಗುವುದು ಕಾಣಲಿಲ್ಲ.