ಕಲಬುರಗಿ: ನೂತನ ಕಾಡಾ ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶರಣಪ್ಪ ತಳವಾರ ಅವರನ್ನು ನಗರ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷರಾದ ಅರವಿಂದ್ ಪೊದ್ದಾರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಪ್ರ.ಕಾರ್ಯದರ್ಶಿಗಳಾದ ಶ್ರೀಕಾಂತ ಆಲೂರ, ಸಂತೋಷ ಮದನೆ, ಕಾರ್ಯದರ್ಶಿ ರಮೇಶ ಗುತ್ತೇದಾರ, ಹಣಮಂತ ಪೂಜಾರಿ, ಅಶೋಕ ಇಂಗಳೆ, ವಿಠಲರಾವ ಸುತ್ತಾರ, ಕೃಷ್ಣಥ ಪೋದ್ದಾರ, ವಿಜಯಕುಮಾರ, ನಾಗೇಶ ಆಲಗೂಡ, ಕೃಷ್ಣಾ ಮಾಡ್ಯಾಳ, ಅಭಿಷೇಕ ಇದ್ದರು.