ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಈಚೆಗೇ ಬರುವ ಎಮ್. ಬಿ. ನಗರ ಹತ್ತಿರ ಕಾವೇರಿ ಬಿ.ಸಿ.ಎಮ್. ವಸತಿ ನಿಲಯದ ಆವರಣದಲ್ಲಿ ಹಾಸ್ಟಲ್ ವಿದ್ಯಾರ್ಥಿಗಳು ಮಂಗಳವಾರ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.
ಹಾಸ್ಟೇಲ್ ಆವರಣದಲ್ಲಿ ಸಾಯಾಂಕಾಲದಂದು ರಾಘವೇಂದ್ರರ ನೇತೃತ್ವದಲ್ಲಿ ಸಸಿಗಳನ್ನು ನೆಟ್ಟು ಸಾರ್ವಜನಿಕರಿಗೆ ಗಿಡ ನೆಡಲು ಕರೆ ನೀಡಲಾಯಿತು.
ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಜೀವನ ನಡೆಸಲು ಪರಿಸರ ಸಂರಕ್ಷಣೆ ಬಹಳ ಅಗತ್ಯವಿದೆ. ಪ್ಲಾಸ್ಟಿಕ್ ಬಳಕೆಯನ್ನು ವಿರೋಧಿಸಿ ಮಳೆಗಾಲ ಮುಗಿಯವವರೆಗೂ ಸಸಿಗಳನ್ನು ನೆಡುವ ಕಾರ್ಯ ನಿರಂತರವಾಗಿರಬೇಕು. ಮತ್ತು ಪೃಕೃತಿಗೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ. ಹೆಚ್ಚಿನ ರೀತಿಯಲ್ಲಿ ಹಣ್ಣಿನ ಗಿಡಗಳನ್ನು ಬೆಳೆಯುವುದರಿಂದ ದಾರಿ ಹೋಕರಿಗೆ ಹಸಿವಿನ ದಾಹ ನೀಗಿಸಬಹುದು. ಈ ಒಂದು ವಿದ್ಯಾರ್ಥಿಗಳ ಕಾರ್ಯಕ್ಕೆ ಜನರು ಮೆಚ್ಚುಗೆ ನೀಡಿದರು.
ಈ ಕಾರ್ಯಕ್ರಮದಲ್ಲಿ ನಿಂಗಣ್ಣ. ಎಮ್ ಕಾಡಮಗೇರಾ, ದುರ್ಗಪ್ಪ, ಲಕ್ಷ್ಮಣ, ಸಂಗಮೇಶ, ಮಾಳಪ್ಪ ಸೇರಿದಂತೆ ಮತ್ತು ಇನ್ನಿತರ ವಿದ್ಯಾರ್ಥಿಗಳಿದ್ದರು.