ಮೈಸೂರು: ಜಿಲ್ಲೆಯಲ್ಲಿ ಡಿ.ದೇವರಾಜ್ ಅರಸು ಪ್ರತಿಮೆ ಸ್ಥಾಪನೆಗೆ ಒತ್ತಾಯಿಸಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಶಾಸಕರು ಎಲ್.ನಾಗೇಂದ್ರ ಹಾಗೂ ಮೈಸೂರು ನಗರ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ರವರಿಗೆ ಅರಸು ಪ್ರತಿಮೆ ಪ್ರತಿಷ್ಠನ ಸಮಿತಿ ನಿಯೋಗದಿಂದ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ನಗರದ ವಿಜಯನಗರ ಬಡಾವಣೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷರಾದ ಜಾಕಿರ್ ಹುಸೇನ್ ಮನವಿ ಪತ್ರಸಲ್ಲಿಸಿ, ನಾಳೆ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿರುವ ದೇವರಾಜ್ ಅರಸು ಸಾಮಾಜಿಕ ಚಿಂತನೆಗಳು ಕುರಿತು ವಿಚಾರಗೋಷ್ಠಿಗೆ ಆಹ್ವಾನಿಸಲಾಗಿದೆ ಎಂದು ಜಾಕಿರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ, ಧ್ವನಿ ಇಲ್ಲದವರಿಗೆ ಧ್ವನಿ ಕೊಟ್ಟಂತ ಧಣಿಗಳು ಹಿಂದುಳಿದ ವರ್ಗದ ನೇತರರಾದ ಸಾಮಾಜಿಕ ನ್ಯಾಯದ ಹರಿಕರಾರು ಆದಂತಹ ದಿವಂಗತ ಡಿ.ದೇವರಾಜ್ ಅರಸುರವರ ಪ್ರತಿಮೆಯನ್ನು ಮೈಸೂರಿನ ಹೃದಯ ಭಾಗದಲ್ಲಿ ನಿರ್ಮಾಣ ಮಾಡಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷರಾದ ಎಂ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮಡಿಕೇರೆ ಗೋಪಾಲ್, ಸಮಿತಿಯ ಪ್ರಧಾನ ಸಂಚಾಲಕರಾದ ಡೈರಿ ವೆಂಕಟೇಶ್ ಉಪಸ್ಥಿತರಿದ್ದರು.