ಶಹಾಬಾದ: ಅನೋನ್ಯವಾದ ಸಂಬಂಧಗಳನ್ನು ಹಾಳಾಗಬಾರದು.ಅದನ್ನು ಬೆಳೆಸುವ ಮೂಲಕ ಇತರ ಗ್ರಾಮಗಳಿಗೆ ಮಾದರಿಯಾಗಬೇಕು ಎನ್ನುವ ಉದ್ದೇಶದಿಂದ ತೆಗೆದುಕೊಂಡ ತೀರ್ಮಾನದಿಂದ ಭಂಕೂರ ಗ್ರಾಪಂ ವ್ಯಾಪ್ತಿಯ ತರಿತಾಂಡಾದಲ್ಲಿನ ಎಲ್ಲಾ ಮೂರು ಗ್ರಾಪಂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ.
ಇಲ್ಲಿನ ಸೇವಾನಗರ ತರಿತಾಂಡಾದಲ್ಲಿ ಸುಮಾರು 1094 ಮತದಾರರು ಇದ್ದಾರೆ.ಇಲ್ಲಿನ ಸಾಮನ್ಯ ಪುರುಷ ಮೀಸಲಾದ ಸ್ಥಾನಕ್ಕೆ ಯಶ್ವಂತ ಚವ್ಹಾಣ, ಸಾಮನ್ಯ ಮಹಿಳೆಗೆ ಮೀಸಲಾದ ಸ್ಥಾನಕ್ಕೆ ರೀನಾ ಮಾರುತಿ ರಾಠೋಡ, ಪರಿಶಿಷ್ಟ ಜಾತಿ ಪುರುಷ ಸ್ಥಾನಕ್ಕೆ ದೇವರಾಜ ಮನ್ನು ರಾಠೋಡ ಅವರನ್ನು ಆಯ್ಕೆ ಮಾಡಿದ್ದಾರೆ.ಈಗಾಗಲೇ ಈ ಸ್ಥಾನಗಳಿಗೆ ಆಕಾಂಕ್ಷಿಗಳಿದ್ದರೂ ಗ್ರಾಮ ನಾಯಕರು, ಸರಪಂಚರು ಹಾಗೂ ಕಾರೋಬಾರಿಗಳು ಕೂಡಿಕೊಂಡು ಅವಿರೋಧವಾಗಿ ಆಯ್ಕೆ ಮಾಡುವ ತೀರ್ಮಾನ ತೆಗೆದುಕೊಂಡಿದ್ದರು.
ಯಶ್ವಂತ ಚವ್ಹಾಣ, ರೀನಾ ಮಾರುತಿ ರಾಠೋಡ, ದೇವರಾಜ ಮನ್ನು ರಾಠೋಡ ಗ್ರಾಪಂ ಚುನಾವಣೆ ನಿಮಿತ್ತ ಈ ಮೂವ್ವರು ನಾಮಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕವಾಗಿದ್ದರಿಂದ ಇವರ ಎದುರಾಳಿಯಾಗಿ ಯಾರು ನಾಮಪತ್ರ ಸಲ್ಲಿಕೆ ಮಾಡಲಿಲ್ಲ.ಅಲ್ಲದೇ ನಿಗದಿತ ಸಮಯದಲ್ಲಿ ಈ ಅಭ್ಯರ್ಥಿಗಳ ವಿರುದ್ಧ ಯಾರು ನಾಮಪತ್ರ ಸಲ್ಲಿಸದಿರುವುದರಿಂದ ಈ ಮೂವ್ವರು ಸರಳವಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ನಡೆಸಿದರೇ ಸ್ಪರ್ಧೆಗೆ ಇಳಿದ ಎಲ್ಲರೂ ಹಣ ವ್ಯಯ ಮಾಡಬೇಕಾಗುತ್ತದೆ.ಇದರಿಂದ ತಾಂಡಾದಲ್ಲಿ ಕಲುಷಿತ ವಾತಾವರಣ ಮೂಡುತ್ತದೆ.ಅಲ್ಲದೇ ವೈರತ್ವ ಬೆಳೆದು ಒಬ್ಬರಿಗೊಬ್ಬರೂ ಮುಖ ನೋಡದಂತಾಗುತ್ತದೆ.ಆದ್ದರಿಂದ ನಮ್ಮ ತಾಂಡಾದಲ್ಲಿ ಜಗಳ, ದ್ವೇಷದ ವಾತಾರಣವನ್ನು ಬೆಳಸದಂತೆ ನೋಡಿಕೊಳ್ಳಲು ಸಭೆ ಕರೆಯಲಾಗಿತ್ತು. ಅಲ್ಲಿ ಅಭಿಪ್ರಾಯವನ್ನು ಹೇಳಿದ ನಂತರ ಈ ತೀರ್ಮಮಾನವನ್ನು ತೆಗೆದುಕೊಳ್ಳಲಾಯಿತು ಎಂದು ಅವಿರೋಧವಾದ ಅಭ್ಯರ್ಥಿಗಳು ತಿಳಿಸಿದರು. ಯಾವುದೇ ರೀತಿಯ ಚುನಾವಣೆ ಮಾಡದೇ ಇತರ ಗ್ರಾಮಗಳಿಗೆ ತರಿತಾಂಡಾ ಮುಖಂಡರು ಮಾದರಿಯಾಗಿದ್ದಾರೆ.
ನಾರಾಯಣ ರಾಠೋಡ,ವಿಷ್ಣು ರಾಠೋಡ,ಶಂಕರ ಪವಾರ, ಶಂಕರ ಪವಾರ, ಗೋಬ್ರು ರಾಠೋಡ, ರಾಜೇಶ ಪವಾರ, ರಾಜು ಪವಾರ,ಧರ್ಮು ಚವ್ಹಾಣ,ಶಂಕರ ಪೂಜಾರಿ, ಅರವಿಂದ ಚವ್ಹಾಣ, ರಮೇಶ ರಾಠೋಡ ಹಾಗೂ ಅನೀಲ ಸಾಹೇಬ (ಮುತ್ಯಾ) ಮತ್ತು ಯುವಕರು ಹಾಜರಿದ್ದರು.