ರಂಗಂಪೇಟೆಯಲ್ಲಿ ಬಸವ ತತ್ವ ಸಮಾವೇಶ: ಕೊರೊನಾ ವಾರಿಯರ್ಸ್ ಸನ್ಮಾನ

0
27

ಸುರಪುರ: ನಗರದ ರಂಗಂಪೇಟೆಯ ನೀಲಕಂಠೇಶ್ವರ ದೇವಸ್ಥಾನ ಬಳಿಯ ಚನ್ನಮಲ್ಲಿಕಾರ್ಜುನ ಗುಂಡಾನೂರ ಅವರ ಗೃಹ ಆವರಣದಲ್ಲಿ ಲಿಂಗೈಕ್ಯ ಬಸವಲಿಂಗಮ್ಮ ಹಾಗು ಲಿಂಗೈಕ್ಯ ಶಿವಲಿಂಗಪ್ಪ ಗುಂಡಾನೂರ ಅವರ ೧೯ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಬಸವ ತತ್ವ ಸಮಾವೇಶ ಹಾಗು ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮೀಜಿಯವರು ಮಾತನಾಡಿ, ಇಂದು ಸಮಾಜದಲ್ಲಿ ಅಶಾಂತಿ ಸಾಮಾಜಿಕ ಕಲಹಗಳು ಉಂಟಾಗಲು ನಮ್ಮಲ್ಲಿಯ ಅಜ್ಞಾನ ಕಾರಣವಾಗಿದೆ,ಅಂತಹ ಅಜ್ಞಾನವನ್ನು ಕಳೆದುಕೊಳ್ಳು ಇಂತಹ ಬಸವ ತತ್ವ ಸಮಾವೇಶಗಳು ಅವಶ್ಯವಾಗಿವೆ ಎಂದರು.ಅಲ್ಲದೆ ಇಂದು ರಾಜ್ಯದಲ್ಲಿನ ರೈತರು ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ,ಆದರೆ ಆಳುವ ಸರಕಾರಗಳು ನಿರ್ಲಕ್ಷ್ಯ ತೊರಿವೆ ಅದರಂತೆ ಕೇಳುವ ವಿರೋಧ ಪಕ್ಷಗಳು ನರಸತ್ತು ಮೂಲೆಯಲ್ಲಿ ಕುಳಿತಿವೆ ಇದರಿಂದಾಗಿ ಇಂದು ರೈತರು ಸಂಕಷ್ಟ ಹೆದರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ಇದಕ್ಕು ಮುನ್ನ ಸಾವಯವ ಕೃಷಿಯ ಬಗ್ಗೆ ತಮ್ಮ ಅನುಭಾವವನ್ನು ಮಂಡಿಸಿದ ರೈತ ಹೋರಾಟಗಾರ್ತಿ ನಾಗರತ್ನ ವ್ಹೀ ಪಾಟೀಲ್ ಯಕ್ಷಿಂತಿ ಅವರು ಮಾತನಾಡಿ, ಸರಕಾರಗಳು ರೈತರ ಹೆಸರಲ್ಲಿ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿವೆ,ಆದರೆ ರೈತರ ಬೆಳೆಗೆ ಸರಿಯಾದ ಬೆಲೆಯನ್ನು ನೀಡುತ್ತಿಲ್ಲ,ಸ್ವಾಮಿನಾಥನ್ ವರದಿ ಜಾರಿ ಮಾಡುತ್ತಿಲ್ಲ,ಇನ್ನು ಕೃಷಿ ಮಸೂದೆಯನ್ನು ಜಾರಿಗೊಳಿಸುವ ಮೂಲಕ ರೈತರ ಸರ್ವನಾಶ ಮಾಡಲು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ,ಜನರು ನಿತ್ಯವು ಮೌಢ್ಯ ಕಂದಾಚಾರಗಳಲ್ಲಿ ತೊಳಲಾಡುತ್ತಿದ್ದಾರೆ. ಮೌಢ್ಯವನ್ನು ತೊರೆದು ವೈಚಾರಿಕತೆಯನ್ನು ಬೆಳೆಸಿಕೊಳ್ಳದಿದ್ದಲ್ಲಿ ಜನರಿಗೆ ಉತ್ತಮವಾದ ಬದುಕು ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧಾರವಾಹಿ ಕಲಾವಿದ ವಿಹಾನ್ ಸೂರ್ಯ ಜಾನಪದ ಗೀತೆಗಳು ಮತ್ತು ಧಾರವಾಹಿಗಳ ಸಂಭಾಷಣೆ ಮೂಲಕ ಎಲ್ಲರನ್ನು ರಂಜಿಸಿದರು.ಸಾಹಿತಿ ವಿಶ್ವನಾಥರಡ್ಡಿ ಗೊಂದಡಗಿ ಹಾಗು ಶರಣ ಸಾಹಿತಿ ಶಿವಣ್ಣ ಇಜೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,ಕಸಾಪ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳ ಮುಖಂಡರಾದ ಬಸವರಾಜ ಜಮದ್ರಖಾನಿ ಉಪಸ್ಥಿತರಿದ್ದು ೨೦೨೧ರ ಬಸವ ದಿನಚರಿಯನ್ನು ಬಿಡುಗಡೆಗೊಳಿಸಿದರು.ನಂತರ ನಗರಸಭೆಯ ಪೌರ ಕಾರ್ಮಿಕರನ್ನು ದಫೇದಾರ ಶರಣಪ್ಪ ಇವರ ನೇತೃತ್ವದಲ್ಲಿ ಹಾಗು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಕೊರೊನಾ ವಾರಿಯರ್ಸ್‌ಗಳನ್ನಾಗಿ ಸನ್ಮಾನಿಸಿ ಗೌರವಿಸಲಾಯಿತು.

ಶ್ರೀಹರಿರಾವ್ ಆದವಾನಿ ಮಹಾದೇವಪ್ಪ ಗಾಳೆನೂರ ಹಾಗು ಚೆನ್ನಮಲ್ಲಿಕಾರ್ಜುನ ಗುಂಡಾನೂರ ಅವರು ವಚನ ಗಾಯನ ಮಾಡಿದರು, ರಾಜು ಕುಂಬಾರ ಸ್ವಾಗತಿಸಿ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಎನ್.ಡಿ.ಪುರತಗೇರಿ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಡಾ: ಶರಣಪ್ಪ ಯಾಳಗಿ ಗುಂಡಣ್ಣ ಕಲಬುರ್ಗಿ ಮಲ್ಲಣ್ಣ ಗುಳಗಿ ವಸಂತ ನಾಲವಾರ ಚನ್ನಬಸವ ಬಾಗೋಡಿ ಮುನ್ನಸಾಬ್ ಅಮ್ಮಾಪುರ ಶರಣು ದೇವದುರ್ಗ ಹಣಮಂತ ಕೊಂಗಂಡಿ ಶರಬಣ್ಣ ಜಾಲಹಳ್ಳಿ ಅಂಬ್ರೇಶ ಕುಂಬಾರ ಮಲ್ಲಿಕಾರ್ಜುನ ಸಪ್ಪಂಡಿ ಪದ್ಮಾ ನಾಲವಾರ ನಾಗರತ್ನ ತಳ್ಳಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here