ಸುರಪುರ: ಆನೆಕಾಲು ರೋಗ ಎಂಬುದು ಸಮಾಜಕ್ಕೆ ಅಂಟಿರುವ ಪಿಡುಗಾಗಿದೆ ಇದರ ನಿರ್ಮೂಲನೆಗಾಗಿ ಎಲ್ಲರು ಔಷಧಿ ಸೇವಿಸುವುದು ಅವಶ್ಯಕವಾಗಿದೆ ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.
ನಗರದ ತಹಸೀಲ್ದಾರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆನೆಕಾಲು ರೋಗ ನಿರ್ಮೂಲನೆಗಾಗಿ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,ಆನೆಕಾಲು ರೋಗ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸರಕಾರ ಇದೇ ೧೫ನೇ ತಾರೀಖಿನಿಂದ ೨೪ರ ವರೆಗೆ ಅಭಿಯಾನ ಹಮ್ಮಿಕೊಂಡಿದ್ದು ಈ ಅಭಿಯಾನದ ಸಂದರ್ಭದಲ್ಲಿ ಎಲ್ಲರಿಗು ಆನೆಕಾಲು ರೋಗ ತಡೆಗೆ ಮುಂಜಾಗೃತೆಗಾಗಿ ಔಷಧಿ ವಿತರಣೆ ಕಾರ್ಯಕ್ರಮ ನಡೆಸಲಾಗುತ್ತದೆ ಎಲ್ಲರು ಔಷಧಿಯನ್ನು ಸೇವಿಸಿ ಆನೆಕಾಲು ಮುಕ್ತರಾಗಿರುವಂತೆ ತಿಳಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಅವರು ಮಾತನಾಡಿ,ಈಗಾಗಲೆ ಆನೆಕಾಲು ರೋಗ ತಡೆಯ ಕುರಿತು ಎಲ್ಲೆಡೆ ವ್ಯಾಪಕವಾಗಿ ಜನ ಜಾಗೃತಿಯನ್ನು ಮಾಡಲಾಗುತ್ತದೆ.ಅದರ ಅಂಗವಾಗಿಯೆ ಸರಕಾರ ಇಂದಿನಿಂದ ೨೪ರ ವರೆಗೆ ವಿಶೇಷ ಅಭಿಯಾನ ನಡೆಸಲಾಗುತ್ತದೆ.ನಮ್ಮ ಆರೋಗ್ಯ ಇಲಾಖೆಯವರು ತಮಗೆ ಔಷಧಿಯನ್ನು ನೀಡಿದಲ್ಲಿ ಅವುಗಳನ್ನು ಸೇವಿಸಿ ಆನೆಕಾಲು ರೋಗದಿಂದ ದೂರ ಇರುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರರು ಮತ್ತು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಸೇರಿದಂತೆ ಎಲ್ಲರು ಸಾಮೂಹಿಕವಾಗಿ ಔಷಧಿಯನ್ನು ಸೇವಿಸುವ ಮೂಲಕ ಎಲ್ಲರಿಗೂ ಔಷಧಿ ಸೇವನೆಗೆ ಪ್ರೇರಣೆಯಾದರು.ಈ ಸಂದರ್ಭದಲ್ಲಿ ಗ್ರೇಡ-೨ ತಹಸೀಲ್ದಾರರಾದ ಸೂಫಿಯಾ ಸುಲ್ತಾನ ಸೇರಿದಂತೆ ಎಲ್ಲಾ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.