“ಅರಿವೇ ಪ್ರಮಾಣು-ಅಕ್ಕನಾಗಮ್ಮ ಜೀವನಕಾವ್ಯ’ ಕೃತಿ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ಆಯ್ಕೆ

0
54

ಕಲಬುರಗಿ: ಜಗದ್ಗುರು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿ೦ದ ನೀಡುವ 2019ನೇ ಸಾಲಿನ “ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ’ಗೆ ಶ್ರೀಮಹಾ೦ತಪ್ಪ ನಂದೂರರವರ “ಅರಿವೇ ಪ್ರಮಾಣು-ಅಕ್ಕನಾಗಮ್ಮ ಜೀವನಕಾವ್ಯ’ ಕೃತಿ ಆಯ್ಕೆಯಾಗಿದೆ ಎಂದು

ಶ್ರೀ ಮಹಾಂತಪ್ಪ ನಂದೂರರವರು ಕಲಬುರಗಿ ಜಿಲ್ಲೆಯ ಪಟ್ಟಣ ಗ್ರಾಮದವರು. ಕೆಲವು ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ರೈಲ್ವೆ ಇಲುಖೆಯಲ್ಲಿ ಹಿರಿಯ ಅನುಭಾಗ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ರಚನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಬರಹಗಾರರು ಹಾಗೂ ಕವಿಗಳು.  “ಉದಕದೊಳಗಣ ಬೆಂಕಿ’, “ದೂರದ ಪದ’, “ಜೀವ ಕೊಳಲು’, “ಕಲ್ಯಾಣವೆ೦ಂಬ ಪ್ರಣತಿ“ಆಯಿತಾರ ಅಮಾಸಿ’, ““ಆನ೦ದ ನಿನಾದ, “ನಾದ ಲೋಕದ ಪುಟ್ಟರಾಜ ಗವಾಯಿ’ ಇವರ ಪ್ರಕಟಿತ ಕೃತಿಗಳು. ಇವರ ಕವಿತೆಗಳು ಪತ್ರಿಕೆಗಳು, ಸಂಕಲನಗಳಲ್ಲಿ ಸಾಹಿತ್ಯ ಅಕಾಡೆಮಿ ಸಂಗ್ರಹದಲ್ಲಿ, ಮಾಸಿಕಗಳಲ್ಲಿ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Contact Your\'s Advertisement; 9902492681

ಆಕಾಶವಾಣಿ, ದೂರದರ್ಶನ, ಯೂಟ್ಯೂಬ್‌ನಲ್ಲಿ ಕಾವ್ಯವಾಚನ ಕಾರ್ಯಕ್ರಮಗಳು ಪ್ರಸಾರವಾಗಿವೆ. ಡಾ. ಡಿ.ಎಸ್‌. ಕರ್ಕಿ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಮೋಹನ ಕುರಡಗಿ ಕಾವ್ಯ ಪ್ರಶಸ್ತಿ, ಬೆಟದೂರು ಪ್ರತಿಷ್ಠಾನ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿಗಳು ಇವರಿಗೆ ಸಂದಿವೆ. ಅಕ್ಕನಾಗಮ್ಮನ ಪಾತ್ರವನ್ನು ಸಾಕ್ಷಿಯಾಗಿರಿಸಿಕೊ೦ಂಡು ರಚನೆಯಾಗಿರುವ 375 ಸುನೀತಗಳನ್ನೊಳಗೊ೦ಡ ದೀರ್ಫಕಾವ್ಯ “ಅರಿವೇ ಪ್ರಮಾಣು-ಅಕ್ಕನಾಗಮ್ಮ .. ಜೀವನಕಾವ್ಯ’ ಕೃತಿ ಈಗ “ಶ್ರೀ ಶಿವರಾತ್ರೀಶ್ಟರ ಪ್ರಶಸ್ತಿ’ಗೆ ಭಾಜನವಾಗಿದೆ.

ಜಗದ್ಗುರು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ 1983ರಿಂದ ಪ್ರತಿ ವರ್ಷ | ಸಾಹಿತ್ಯ, ಧರ್ಮ, ಸಂಸ್ಕೃತಿ ಕುರಿತಂತೆ ಪ್ರಕಟವಾಗುವ ಉತ್ತಮ ಕೃತಿಗೆ “ಶ್ರೀ ಶಿವರಾತ್ರೀಶ್ವರ ಪ್ರಶಸಿ’ ನೀಡಲಾಗುತ್ತಿದೆ. ಈವರೆಗೆ 31 ಕೃತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ 25,000 ರೂ.ಗಳ ಗೌರವಧನ, ಸ್ವಸ್ತಿವಾಚನ ಹಾಗೂ ಪ್ರಶಸ್ತಿಫಲಕಗಳನ್ನು ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ಇನ್ನೂ ನಿಗದಿ ಮಾಡಿಲ್ಲ ಎಂದು ಜೆಎಸ್.ಎಸ್ ಮಹಾಪೀಠ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here