ಶಹಾಬಾದ: ನಗರದ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞೆ ಡಾ.ಚಂದ್ರಿಕಾ ಕರ್ತವ್ಯಕ್ಕೆ ತಡವಾಗಿ ಬಂದು ನಗರಸಭೆಯ ಅಧ್ಯಕ್ಷೆ, ನಗರಸಭೆಯ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಸೋಮವಾರದಂದು ನಡೆದಿದೆ.
ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ನಗರಸಭೆಯ ಸದಸ್ಯರಾದ ಸಾಬೇರಾಬೇಗಂ ಹಾಗೂ ಪಾರ್ವತಿ ಪವಾರ ನಗರದ ಇಬ್ಬರು ಮಹಿಳೆಯರ ಶಸ್ತ್ರ ಚಿಕಿತ್ಸೆಯ ಹೊಲಿಗೆಯನ್ನು ಬಿಚ್ಚಿಸಲು ಹೋದಾಗ, ಸ್ತ್ರೀರೋಗ ತಜ್ಞೆ ಡಾ.ಚಂದ್ರಿಕಾ ಇರಲಿಲ್ಲ. ಕೂಡಲೇ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರು. ಅದಕ್ಕೆ ಅವರು ರಜೆ ಮೇಲೆ ಇರಬಹುದೆಂದು ತಿಳಿಸಿದರು. ಆಗ ಡಾ.ಚಂದ್ರಿಕಾ ರಜೆ ಇದ್ದಾರೇಯೇ ಎಂದು ವೈದ್ಯಾಧಿಕಾರಿ ಡಾ.ರಹೀಮ್ ಅವರಿಗೆ ಪ್ರಶ್ನಿಶಿಸಿದರು. ರಜೆ ನೀಡಿಲ್ಲ ಬರಬಹುದೇನೋ ಎಂದು ವೈದ್ಯಾಧಿಕಾರಿ ಡಾ.ರಹೀಮ್ ಹೇಳಿದರು.
ಬಹಳ ತಡವಾಗಿ ಬಂದ ಡಾ.ಚಂದ್ರಿಕಾ ಅವರನ್ನು ನಗರಸಭೆಯ ಅಧ್ಯಕ್ಷರು ಹಾಗೂ ಸದಸ್ಯರು ಯಾಕೆ ತಡವಾಗಿ ಬಂದಿದ್ದೀರಾ ಎಂದು ಕೇಳಿದಕ್ಕೆ, ನೀವಾರು ಕೇಳೋರು.ಅದನ್ನು ರೋಗಿಗಳು ಕೇಳಬೇಕು.ಕೇಳೋಕೆ ನಿಮಗೆ ಹಕ್ಕಿಲ್ಲ. ದೂರು ನೀಡುವುದಿದ್ದರೇ ನೀಡಿ.ನನ್ನ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ಎಂದು ಪ್ರತ್ಯುತ್ತರ ನೀಡಿದರು. ಅಲ್ಲದೇ ಬೇಕಾಬಿಟ್ಟಿಯಾಗಿ ಮಾತನಾಡುತ್ತಿರುವುದನ್ನು ಕಂಡು ನಗರದ ಸಾರ್ವಜನಿಕರು ಹಾಗೂ ಮುಖಂಡರು ಜಿಲ್ಲಾ ರೋಗ್ಯ ಅಧಿಕಾರಿ ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಅಲ್ಲದೇ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್, ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ ಮಾತನಾಡಿ ನಿಮಗೆ ಇಲ್ಲಿ ಕೆಲಸ ಮಾಡಲು ಇಷ್ಟ ಇಲ್ಲದಿದ್ರೆ ಬೇರೆ ಕಡೆ ವರ್ಗಾವಣೆ ತೆಗೆದುಕೊಳ್ಳಿ ಎಂದು ಹೇಳಿದಕ್ಕೆ, ನಿವೇ ವರ್ಗಾವಣೆ ಮಾಡಿಸಿ ಎಂದು ಹೇಳಿ ಡಾ.ಚಂದ್ರಿಕಾ ಇಲ್ಲಸಲ್ಲದ ಮಾತನಾಡಿದರು.ಎಷ್ಟೇ ತಿಳಿಹೇಳಿದರೂ ಕೇಳದೇ ಚುನಾಯಿತ ಜನ ಪ್ರತಿನಿಧಿ, ಮುಖಂಡರು ಮುಂದೆ ಕಾಲಮೇಲ ಕಾಲನ್ನು ಹಾಕಿ ಎಲ್ಲರ ವಿಡಿಯೋ ಮಾಡಿ, ನನ್ನು ಯಾರು ಏನು ಮಾಡಲು ಸಾಧ್ಯವಿಲ್ಲ ಎನ್ನುವಷ್ಟ ಮಟ್ಟಿಗೆ ಮಾತನಾಡಿದರು.
ಅಲ್ಲದೇ ವೈದ್ಯಾಧಿಕಾರಿ ಡಾ.ರಹೀಮ್ ಅವರಿಗೆ ನಿನೇ ಎಲ್ಲಾ ಮಾಡಿದ್ದು, ನಿನಗೆ ಏನ್ ಮಾಡ್ತಿನಿ ನೋಡು ಎಂದು ಹೇಳಿ ಮನೆಗೆ ಹೋದರು.
ನಂತರ ಮುಖಂಡರು ಶಾಸಕರಿಗೆ ದೂರು ಸಲ್ಲಿಸಿ, ಡಿಹೆಚ್ಓ ಬರುವವರೆಗೂ ಇಲ್ಲಿಂದ ಸರಿಯುವುದಿಲ್ಲ.ಅಲ್ಲದೇ ಅವರಿಗೆ ಅಮಾನತು ಮಾಡದಿದ್ದರೇ ಎರಡು ದಿನದಲ್ಲಿ ಆಸ್ಪತ್ರೆಯ ಮುಂದೆ ಹೋರಾಟ ಕೈಗೊಳ್ಳುತ್ತೆವೆ ಎಂದು ಪಟ್ಟು ಹಿಡಿದರು. ನಂತರ ಡಿಹೆಚ್ಓ ಪರವಾಗಿ ಬಂದ ಅಧಿಕಾರಿಗೆ ದೂರು ಪತ್ರ ಸಲ್ಲಿಸಿದರು.ವೈದ್ಯೆ ವಿರುದ್ಧ ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಸೂರ್ಯಕಾಂತ ಕೋಬಾಳ, ನಾಗರಾಜ ಕರಣಿಕ್,ಮಲ್ಲಿಕಾಜರ್ುನ ವಾಲಿ,ಶಿವಕುಮಾರ ನಾಟೇಕಾರ,ಮಹ್ಮದ್ ಅಜರ್,ಕಿರಣ ಚವ್ಹಾಣ, ಇಮ್ರಾನ್ ಸೇರಿದಂತೆ ಅನೇಕರು ಹಾಜರಿದ್ದರು.