ಶಹಾಬಾದ:ತಾಲೂಕಿನಲ್ಲಿ ಮಂಗಳವಾರ ನಡೆಯುವ ಗ್ರಾಪಂ ಚುನಾವಣೆಯ ನಿಮಿತ್ತ ಎಲ್ಲಾ ಸಿದ್ಧತೆ ಮಾಡಿಕೊಂಡು ಸೋಮವಾರ ಮತಗಟ್ಟೆಯ ಸಿಬ್ಬಂದಿಗಳು ಆಯಾ ಮತಗಟ್ಟೆ ಕೇಂದ್ರಕ್ಕೆ ಮತಪೆಟ್ಟಿಗೆ ಹಾಗೂ ಇನ್ನೀತರ ಸಾಮಗ್ರಿಗಳೊಂದಿಗೆ ತೆರಳಿದರು.
ತಾಲೂಕಿನ ಭಂಕೂರ, ಹೊನಗುಂಟಾ, ಮರತೂರ ಹಾಗೂ ಹೊನಗುಂಟಾ ಗ್ರಾಪಂಗಳಿಗೆ ನಡೆಯುವ ಚುನಾವಣೆಯಲ್ಲಿ ಒಟ್ಟು 39 ಮತಗಟ್ಟೆಗಳಲ್ಲಿ 225 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಒಟ್ಟು 249 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಇದರಲ್ಲಿ 79 ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಚುನಾವಣೆಯಲ್ಲಿ ಬೆಳಿಗ್ಗೆ 9 ಗಂಟೆಗೆ ನಗರದ ಗಂಗಮ್ಮ ಶಾಲೆಯಲ್ಲಿ ಸೇರಿದ ಚುನಾವಣಾ ಸಿಬ್ಬಂದಿಗಳು ಚುನಾವಣಾ ಅಧಿಕಾರಿಗಳ ಆದೇಶದ ಮೇರೆಗೆ ಚುನಾವಣೆಗೆ ಬೇಕಾದ ಎಲ್ಲಾ ಸಲಕರಣೆಗಳನ್ನು ಪಡೆದರು.ಅಲ್ಲದೇ ಸಿಬ್ಬಂದಿಗಳಿಗೆ ನೀಡಿದ ಎಲ್ಲಾ ಸಾಮಗ್ರಿಗಳನ್ನು ಒಂದು ಬಾರಿ ಪರೀಕ್ಷಿಸಿ ಮತಗಟ್ಟೆಗೆ ತೆರಳಲು ತಿಳಿಸಲಾಯಿತು. ಆಯಾ ಮತಗಟ್ಟೆಗೆ ತೆರಳುವ ಮುಂಚೆ ಸಿಬ್ಬಂದಿಗಳಿಗೆ ತಹಸೀಲ್ದಾರ ಸುರೇಶ ವರ್ಮಾ ಅವರು ಚುನಾವಣೆಯ ಬಗ್ಗೆ ಮತ್ತೊಮ್ಮೆ ತರಬೇತಿ ನೀಡಿದರು.
ಚುನಾವಣೆ ಸೂಸುತ್ರವಾಗಿ ನಡೆಯಲು ನೋಡಲ್ ಅಧಿಕಾರಿ,ಎಮಸಿಸಿ ತಂಡ, ಸೆಕ್ಟರ್ ಅಧಿಕಾರಿ, ಸಂಚಾರಿ ಪೊಲೀಸ್ ತಂಡ ಕಾರ್ಯನಿರ್ವಹಿಸಲಿದೆ. ಚುನಾವಣೆಯ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ, ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಕೊರೊನಾದ ಸಂಬಂದ ಮತದಾನಕ್ಕೆ ಬರುವ ಮತದಾರರಿಗೆ ಸ್ಕ್ರೀನಿಂಗ್,ಸ್ಯಾನಿಟೈಜರ್ ವ್ಯವಸ್ಥೆ ಹಾಗೂ ಅಂತರ ಕಾಯ್ದುಕೊಳ್ಳುವಂತೆ ನಿದರ್ೇಶನ ನೀಡಲಾಗಿದೆ.ಅಲ್ಲದೇ ಅದಕ್ಕಾಗಿ ಆಶಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.ಚುನಾವಣೆಯ ಭದ್ರತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಶಿವನಗೌಡ ಪಾಟೀಲ, ಸೆಕ್ಟರ್ ಅಧಿಕಾರಿಗಳಾದ ಪುರುಷೋತ್ತಮ, ಸೋಮು ರಾಠೋಡ, ಎಮಸಿಸಿ ತಂಡದ ಅಧಿಕಾರಿಗಳಾದ ಲಕ್ಷ್ಮಣ ಶೃಂಗೇರಿ, ಶಾಂತರೆಡ್ಡಿ ದಂಡಗುಲಕರ್,ಜಗನ್ನಾಥ, ಪಿಐ ಬಿ.ಅಮರೇಶ, ಪಿಎಸ್ಐ ತಿರುಪತಿ ಸೇರಿದಂತೆ ಪೊಲೀಸ್ ಸಿಬ್ಬಂದಿ ವರ್ಗದವರು ಇದ್ದರು.