ಕಸ ವಿಲೇವಾರಿ ವಾಹನಗಳ ಸೌಲಭ್ಯ ಒದಗಿಸಲು ಪೌರಾಯುಕ್ತರಿಗೆ ಮನವಿ

0
55

ಸುರಪುರ: ಸ್ಥಳೀಯ ನಗರಸಭೆ ವ್ಯಾಪ್ತಿಯ ಸತ್ಯಂಪೇಟೆಯ (ವಣಕಿಹಾಳ) ಎರಡು ವಾರ್ಡುಗಳಲ್ಲಿ ಕಸ ವಿಲೇವಾರಿಗೊಳ್ಳದೇ ಎಲ್ಲಾ ಕಡೆ ಕಸದ ರಾಶಿ ತುಂಬಿ ಹೋಗಿದ್ದು ಕೂಡಲೇ ಕಸ ವಿಲೇವಾರಿ ಸಲುವಾಗಿ ವಾಹನ ಸೌಲಭ್ಯ ಒದಗಿಸಬೇಕು ಎಂದು ಲೋಕ ಜನಶಕ್ತಿ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ ನಾಯಕ ಒತ್ತಾಯಿಸಿದ್ದಾರೆ.

ಈ ಮೊದಲು ಪುರಸಭೆ ನಂತರ ನಗರಸಭೆ ಆದ ನಂತರ ವಾರ್ಡುಗಳ ವಿಂಗಡಣೆಯಲ್ಲಿ ಎರಡು ವಾರ್ಡುಗಳನ್ನು ಒಳಗೊಂಡಿದ್ದು ಆದರೆ ಇಲ್ಲಿನ ನಾಗರಿಕರಿಗೆ ನಗರಸಭೆಯಿಂದ ಕಸ ವಿಲೇವಾರಿ ಸಲುವಾಗಿ ವಾಹನ ಸೌಲಭ್ಯ ಒದಗಿಸದೇ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ, ನಗರಸಭೆ ಉಳಿದ ಎಲ್ಲಾ ವಾರ್ಡುಗಳಲ್ಲಿ ಕಸ ವಿಲೇವಾರಿ ಸಲುವಾಗಿ ವಾಹನಗಳ ಸೌಲಭ್ಯ ನೀಡಲಾಗುತ್ತಿದ್ದು ಆದರೆ ಇಲ್ಲಿನ ೨ ವಾರ್ಡುಗಳ ಜನರಿಗೆ ಮಾತ್ರ ವಾಹನಗಳ ಸೌಲಭ್ಯ ಏಕೆ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ, ಕಸ ವಿಲೇವಾರಿ ಆಗದೇ ಎಲ್ಲೆಂದರಲ್ಲಿ ರಸ್ತೆಯ ಮೇಲೆ ಹಾಗೂ ಚರಂಡಿಗಳಲ್ಲಿ ಕಸ ಸಂಗ್ರಹಣಗೊಂಡು ಗಬ್ಬೆದ್ದು ನಾರುತ್ತಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಅಪಾಯ ತಂದೊಡ್ಡಿದೆ ಕೂಡಲೇ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಎರಡು ವಾರ್ಡುಗಳ ಜನರಿಗೆ ಅನುಕೂಲವಾಗುವಂತೆ ಪ್ರತಿನಿತ್ಯ ಕಸ ವಿಲೇವಾರಿ ವಾಹನ ಸೌಲಭ್ಯ ಒದಗಿಸಬೇಕು ಎಂದು ಅವರು ಪೌರಾಯುಕ್ತ ಏಜಾಜ್ ಹುಸೇನ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ, ಈ ಸಂದರ್ಭದಲ್ಲಿ ಮುಖಂಡ ರಾಜಾ ರಾಮಪ್ಪ ನಾಯಕ (ಜೇಜಿ) ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here