ಕಲಬುರಗಿ: ಅಂಗಡಿ ಬಳಿ ರಾಜಕೀಯ ಚರ್ಚೆಯ ವೇಳೆಯಲ್ಲಿ ಭಿನ್ನ ಮತದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಚಾಕು ಇರಿದ ಘಟನೆ ಸೇಡಂ ತಾಲೂಕಿನ ಕೋಡ್ಡಾ ಗ್ರಾಮದ ಚಹಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶೇಖರ ಹಲ್ಲೆಗೆ ಒಳಗಾದ ವ್ಯಕ್ತಿ. ವೆಂಕಟರೆಡ್ಡಿ ಗುರುಲಿಂಗಪ್ಪ ಕೋಡ್ತಾ ಎಂಬಾತ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಶೇಖರ ಎಂಬವರನ್ನು ಕೂಡಲೇ ಸೇಡಂ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ತನಿಖೆ ನಡೆಸಿಸುತ್ತಿರುವ ಸೇಡಂ ಪೊಲೀಸ್ ಠಾಣೆಯ ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ನಾನಾಗೌಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.