ರಿಪಬ್ಲಿಕನ್ ಯೂತ್ ಫೆಡರೆಷನ್ ವತಿಯಿಂದ ವಿಶೇಷ ಉಪನ್ಯಾಸ

0
142

ಕಲಬುರಗಿ: ರಿಪಬ್ಲಿಕನ್ ಯೂತ್ ಫೆಡರೆಷನ್ ವತಿಯಿಂದ ಜಗತ್ ವೃತ್ತದ ಡಾ. ಬಿ. ಆರ್. ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವ ಹಾಗು ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಭಾಯಿ ಫುಲೆರವರ ಜನ್ಮ ದಿನದ ಪ್ರಯುಕ್ತ ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಒಂದು ಕಾರ್ಯಕ್ರಮದ ಸಾನಿಧ್ಯವನ್ನು ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿಯವರು ವಹಿಸಿಕೊಂಡಿದ್ದರು ಅದೆ ರೀತಿಯಾಗಿ  ಕಾರ್ಯಕ್ರಮದ ಉದ್ಘಾಟಕರಾಗಿ ಕಡಗಂಚಿ ಗ್ರಾಮದ ನೂತನ ಗ್ರಾಮ ಪಂಚಾಯತಿಯ ಸದಸ್ಯರಾದ ಆರತಿ ಉತ್ತಮ ಗಡಬಳ್ಳಿಯವರು ಉದ್ಘಾಟಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಪಬ್ಲಿಕನ್ ಯೂತ್ ಫೆಡರೆಷನ್ ನ ಜಿಲ್ಲಾ ಸಂಚಾಲರಾದ ಹನುಮಂತ ಇಟಗಿಯವರು ವಹಿಸಿದರು, ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಡಾ. ಜಯದೇವಿ ಗಾಯಕವಾಡರವರು ಹಾಗು ಮತ್ತೋರ್ವ ಉಪನ್ಯಾಸಕರಾದ ರಮೇಶ್ ಮಾಡ್ಯಾಳಕರ್ ಸರ್ ಅವರುಗಳು ಕೋರೆಗಾಂವ ವಿಜಯೋತ್ಸವ ಹಾಗು ಮಾತೆ ಸಾವಿತ್ರಿಬಾಯಿ ಪುಲೆಯವರ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ರೂ, ಮುಖ್ಯ ಅತಿಥಿಗಳಾಗಿ‌ ಪ್ರಗತಿಪರ ಹಿರಿಯ ಚಿಂತಕರಾದ ಬಿ. ಬಿ. ರಾಂಪೂರೆಯವರು, ಶಹಾಪೂರ ಪುರಸಭೆಯ ಆಯುಕ್ತರಾದ ರಮೇಶ ಪಟ್ಟೆದಾರರವರು ವಹಿಸಿಕೊಂಡರು ರಿಪಬ್ಲಿಕನ್ ಯೂತ್ ಫೆಡರೆಷನ್ ನ ಗೌರವ ಸಂಚಾಲಕರಾದ ಸಂತೋಷ ಮೇಲ್ಮನಿ ಅವರು ವೇದಿಕೆಯ ಮೇಲಿದ್ದರು ಕಾರ್ಯಕ್ರಮದ ನಿರ್ವಹಣೆಯನ್ನು ನಾಗೇಂದ್ರ ಜವಳಿಯವರು ನೆರವೇರಿಸಿದರು ಸ್ವಾಗತವನ್ನು ಧರ್ಮಣ್ಣಾ ಜೈನಾಪೂರ ರವರು ಕೋರಿದರು ವಂದನಾರ್ಪಣೆಯನ್ನು ಧರ್ಮಣ್ಣಾ ಕೋಣೆಕರ್ ರವರು ಮಾಡಿದರು..

ಈ ಸಂದರ್ಭದಲ್ಲಿ ಸಂಘಟಕರಾದ ಮಿಲಿಂದ ಸನಗುಂದಿ, ಶೀವಕುಮಾರ ಜಾಲವಾದ, ಬಾಲಾಜಿ ಚಿತ್ತೆಕರ್,  ರಾಣು ಮುದ್ದನಕರ್, ಅಜಯ ಕೋರಳ್ಳಿ, ಅನೀಲ ಸಾಜರೆ, ಮಲ್ಲಿಕಾರ್ಜುನ ಬೆಲಸೂರ್, ಅಶೋಕ ಕಪನೂರ,  ಶಶಿ ಆಲೂರ್ಕರ್, ಸಿದ್ಧು ಬೆಲಸೂರ್, ಮಲ್ಲಿಕಾರ್ಜುನ್ ಹೋಸಮನಿ, ಲವಿ ಕಡಗಂಚಿ, ಸಂಜಯ ಸಂಕನ್ಕರ್, ವಿದ್ಯಾಸಾಗರ ಬಬಲಾದಕರ್, ಲಕ್ಷ್ಮೀಕಾಂತ ಬಾಲಾಜಿ, ಶರಣು ಸೂತಾರ್, ಸೂರ್ಯಕಾಂತ ಕೊಟ್ಟರಗಾ, ನಾಮದೇವ ಬಬಲಾದಕರ್,  ಇವರುಗಳು ಉಪಸ್ಥಿತರಿದ್ದರು..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here