ಅಭಿವೃದ್ಧಿ ನಿಗಮ ನಿರ್ದೇಶಕರ ನೇಮಕದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಕಡೆಗಣನೆಗೆ ಆಕ್ರೋಶ

0
145

ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರ ನೂತನವಾಗಿ ರಾಜ್ಯದಲ್ಲಿ ಘೋಷಣೆ ಮಾಡಿರುವ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರ ನೇಮಕದಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ನಾಡಿನಲ್ಲಿಯೇ ವೀರಶೈವ ಲಿಂಗಾಯತ ಸಮುದಾಯ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಭಾಗವನ್ನು ಮರೆತಿರುವುದು ಸರಿಯಲ್ಲವೆಂದು ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯ ನಾಗಲಿಂಗಯ್ಯ ಮಠಪತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಡಿನ ವೀರಶೈವ ಲಿಂಗಾಯತ ಸಮುದಾಯದ ಬಡ ಜನತೆಯ ಬದುಕಿಗೆ ಆಸರೆಯಾಗಲು ನಿಗಮ ಘೋಷಣೆ ಮಾಡಿ ರೂ.೫೦೦ ಕೋಟಿಗಳನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹವಾಗಿದ್ದು, ಆದರೆ ನಿಗಮಕ್ಕೆ ನಿರ್ದೇಶಕರನ್ನಾಗಿ ಸಮುದಾಯದ ಜನತೆಯ ಬದುಕಿಗಾಗಿ ದುಡಿದವರನ್ನು ಪರಿಗಣಿಸುವುದನ್ನು ಬಿಟ್ಟು ಬಹುತೇಕ ಶಾಸಕರನ್ನು ನಿರ್ದೇಶಕರನ್ನಾಗಿ ಮಾಡಿರುವುದು ಸರಿಯಾದ ಕ್ರಮವಲ್ಲವೆಂದು ಕೂಡಲೇ ಮುಖ್ಯಮಂತ್ರಿಗಳು ನಿರ್ದೇಶಕರ ಪಟ್ಟಿಯನ್ನು ರದ್ದುಗೊಳಿಸಿ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ಮುಂಬೈ ಕರ್ನಾಟಕ ಮೊದಲು ಮಾಡಿಕೊಂಡು ಸಮಾಜಕ್ಕಾಗಿ ದುಡಿದ ಮಹನೀಯರನ್ನು ಗುರುತಿಸಿ ನೇಮಕ ಮಾಡುವಂತೆ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಒಂದೆಡೆ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಭಾಗವೇ ಸಮಗ್ರ ಅಭಿವೃದ್ಧಿ ಪಡಿಸುವುದು ತಮ್ಮ ಬಹುದೊಡ್ಡ ಕನಸೆಂದು ಸಾರಿ ಸಾರಿ ಹೇಳುವ ಅವರು ಅವರದೇ ನೇತೃತ್ವದ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವೀರಶೈವ ಲಿಂಗಾಯತ ಸಮುದಾಯದ ಯಾವೊಬ್ಬ ಶಾಸಕರಿಗೂ ಮಂತ್ರಿ ಪದವಿ ನೀಡಿಲ್ಲ.  ಅದೇ ರೀತಿ ನಿಗಮದಲ್ಲಿಯೂ ಸಹ ಇದೇ ಧೋರಣೆ ಮುಂದುವರೆಸಿದಿರುವುದು ಮುಖ್ಯ ಮಂತ್ರಿಗಳಿಗೆ ಶೋಭೆ ತರುವುದಿಲ್ಲ.

ಕಲ್ಯಾಣ ಕರ್ನಾಟಕದ ಬಹುತೇಕ ವೀರಶೈವ ಲಿಂಗಾಯತ ಸಮುದಾಯದ ಮಹನೀಯರಿದ್ದು ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿದ್ದು, ಅಂತಹವರು ಮುಖ್ಯಮಂತ್ರಿಗಳ ಕಣ್ಣಿಗೆ ಕಾಣಿಸಲಿಲ್ಲವೇ ಎಂದು ಪ್ರಶ್ನಿಸಿದ ಅವರು ಶಾಸಕರುಗಳನ್ನೇ ನಿಗಮದ ನಿರ್ದೆಶಕರನ್ನಾಗಿ ಮಾಡುವ ಅವಶ್ಯಕತೆಯಾದರೂ ಏನಿತ್ತು ? ಎಂದು ಪ್ರಶ್ನಿಸಿರುವ ಅವರು ಮುಖ್ಯ ಮಂತ್ರಿಗಳ ಅಧಿಕಾರ ವಿಕೇಂದ್ರೀಕರಣ ತತ್ವ ಅನುಸರಿಸುವಂತೆ ಮಠಪತಿ ಕೋರಿದ್ದಾರೆ.  ಮುಂದಿನ ವಾರ ನಿಯೋಗದ ಮೂಲಕ ಬೆಂಗಳೂರಿಗೆ ತೆರಳಿ ನಿಗಮದಲ್ಲಿ ಈ ಭಾಗದವರನ್ನು ಪರಿಗಣಿಸುವಂತೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಮಠಪತಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here