ಆಳಂದ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ತಾಲೂಕಿನಲ್ಲಿ ನಿರಂತರ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಶುಕ್ರವಾರ ಖಜೂರಿ ಜಿ.ಪಂ ವ್ಯಾಪ್ತಿಯ ಹೊದಲೂರ ಗ್ರಾಮದಲ್ಲಿ ಹೊದಲೂರ- ಜಮಗಾ ಆರ್ ಮಾರ್ಗದ ೧ ಕೋಟಿ ರೂ. ವೆಚ್ಚದ ಕೂಡು ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಗಡಿಭಾಗದ ಹಳ್ಳಿಗಳಿಗೆ ಈ ಕೂಡು ರಸ್ತೆ ನಿರ್ಮಾಣದಿಂದ ಸಂಪರ್ಕ ಕಾರ್ಯ ಸುಲಭವಾಗಲಿದೆ ಅಲ್ಲದೇ ಸೇತುವೆ ನಿರ್ಮಾಣದಿಂದ ಸಮಯದ ಉಳಿತಾಯವಾಗಲಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅತ್ಯಂತ ಮುತುರ್ವಜಿವಹಿಸಿ ಈ ಎರಡು ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಬೇಕು ಎಂದು ತಿಳಿ ಹೇಳಿದರು.
ಶಾಸಕನಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗೆ ಗಡಿನಾಡ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ನೂರಾರು ಕೋಟಿ ರೂ ಅನುದಾನ ತಂದಿದ್ದೇನೆ ಅದರ ಫಲವಾಗಿಯೇ ಇಂದು ಕಾಮಗಾರಿಗಳು ಪ್ರಗತಿಯಲ್ಲಿವೆ. ಜನ ತಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಸತತ ಪ್ರಯತ್ನಿಸುತ್ತಿದ್ದೇನೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶಿವಲಿಂಗೇಶ್ವರ ಮಠದ ವೃಷಭಲಿಂಗ ಶ್ರೀ, ತಾ.ಪಂ ಉಪಾಧ್ಯಕ್ಷ ಗುರುನಾಥ ಪಾಟೀಲ, ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ, ಮಹಾದೇವ ಶಿಂಧೆ, ಮಲ್ಲಿನಾಥ ಕೋರೆ, ಶರಣು ಮುರುಮೆ, ಭೀಮಾಶಂಕರ ಕಲಶೆಟ್ಟಿ, ಗಿರಿಮಲ್ಲ ರಾಠೋಡ್, ಬಸವರಾಜ ಮೂಲಗೆ, ಗಹನಿನಾಥ ಬಿರಾದಾರ, ರಘು ಪಾಟೀಲ ಸೇರಿದಂತೆ ಅನೇಕರು ಇದ್ದರು.