ಕರುಣಾ ಟೋಯೋಟಾ ಕಂಪೆನಿಯೊಂದಿಗೆ ಪಿಡಿಎ ಕಾಲೇಜು ಒಡಂಬಡಿಕೆ

0
68

ಕಲಬುರಗಿ: ಪೂಜ್ಯ ದೊಡ್ಡಪ್ಪ ಅಪ್ಪಾ ಕಾಲೇಜಿನ ಅಟೋಮೋಬೈಲ್ ವಿಭಾಗ ಹಾಗೂ ಕರುಣಾ ಟೋಯೋಟಾ ನಡುವೆ ಶುಕ್ರವಾರ ಒಡಂಬಡಿಕೆಯಾಗಿದೆ.

ಒಡಂಬಡಿಕೆಯಲ್ಲಿ ಕರುಣಾ ಟೋಯೋಟಾದ ವತಿಯಿಂದ ರಾಘವೇಂದ್ರ ಎಸ್, ಮ್ಯಾನೇಜರ್-ಸರ್ವೀಸ್ ವ್ಯಾಸ್ ಆರ್. ಜೋಷಿ, ಮ್ಯಾನೇಜರ್-ಸೇಲ್ಸ್, ಬಸವರಾಜ್ ಡಿ.ಕೆ, ಮ್ಯಾನೇಜರ್- ಮಾರ್ಕೆಟಿಂಗ್ ಹಾಗೂ ಪೂಜ್ಯ ದೊಡ್ಡಪ್ಪ ಅಪ್ಪಾ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಪ್ರಿನ್ಸಿಪಾಲ್ ಡಾ. ಎಸ್.ಎಸ್. ಹೆಬ್ಬಾಳ್, ಅಕ್ಯಾಡೆಮಿಕ್ ಡೀನ್ ಡಾ. ಎಸ್.ಆರ್. ಪಾಟೀಲ್, ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಚನ್ನಪ್ಪ ಎಚ್. ಬಿರಾದಾರ್, ಡಾ. ಎಸ್.ಆರ್. ಹೊಟ್ಟಿ, ಪ್ರೊ. ಎಸ್.ಬಿ. ಗುಬ್ಬೇವಾಡ್ ಹಾಗೂ ಬಂಡು ಜೇವರ್ಗಿ ಅವರು ಉಪಸ್ಥಿತರಿದ್ದರು.

Contact Your\'s Advertisement; 9902492681

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ತುಂಬ ಮಹತ್ವ ನೀಡಲಾಗುತ್ತಿದೆ, ಅಂತೆಯೇ ಈಗಿನ ಶಿಕ್ಷಣದ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲಾಗುತ್ತಿದೆ. ಈ ದಿಸೆಯಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಹಾಮಂಡಳಿ ಹೊಸ ದೆಹಲಿ, (ಂIಅಖಿಇ) ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಸೇವಾಯೋಗ್ಯ ಹಾಗೂ ಪರಿಣಿತ ತಾಂತ್ರಿಕ ನೈಪುಣ್ಯತೆ ಹೊಂದಿರುವ ಅಭಿಯಂತರರನ್ನುಸೃಷ್ಠಿಸುವುದರ ಜೊತೆಗೆ ಅವರನ್ನು ಉದ್ಯಮಶೀಲರನ್ನಾಗಿ ಮಾಡುವ ಜವಾಬ್ದಾರಿ ದೇಶದ ಎಲ್ಲ ತಾಂತ್ರಿಕ ಮಹಾವಿದ್ಯಾಲಯವು ಹಾಗೂ ವಿಶ್ವವಿದ್ಯಾಲಯಗಳ ಮೇಲಿದೆ. ಈಗಿನ ಪಠ್ಯಕ್ರಮದಲ್ಲಿ ಸಮಗ್ರ ಬದಲಾವಣೆ ಮಾಡಿ, ಪ್ರಾಯೋಗಿಕ ಬೋಧನೆಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಮಹಾವಿದ್ಯಾಲಯದಿಂದ ಹೊರಬರುವ ಅಭಿಯಂತರಗಳ ವಿವಿಧ ಉದ್ಯಮ ಕ್ಷೇತ್ರದ ಕೆಲಸಕ್ಕೆ ಸೇರಲು ಪರಿಣಿತಿಯನ್ನು ಹೊಂದಲು ಒಡಂಬಡಿಕೆ ಮಹತ್ವದ್ದಾಗಿದೆ.

ದೇಶದಲ್ಲಿ ವಿಶ್ವವಿದ್ಯಾಲಯ ಯೋಜನಾ ಆಯೋಗ (Uಉಅ), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಹಾಮಂಡಳಿ ಹಾಗೂ ತಾಂತ್ರಿಕ ವಿಶ್ವವಿದ್ಯಾಲಯಗಳು ಬುಡಮಟ್ಟದ ಇಂಜಿನಿಯರಿಂಗ್ ಮಹಾವಿದ್ಯಾಲಯಗಳಿಗೆ ಸ್ವಾಯತ್ತತೆಯನ್ನು ನೀಡುತ್ತಿದೆ. ಇಂತಹ ಮಹಾವಿದ್ಯಾಲಯಗಳು ತಮ್ಮದೇ ಆದ ಬೋಧನಾ ವಿಧಾನವನ್ನು ಅಳವಡಿಸಿಕೊಂಡು ಉದ್ಯಮ ಕ್ಷೇತ್ರದ ನಿರೀಕ್ಷೆಯಂತೆ ಕೆಲಸ ಮಾಡುವ ಅನಿವಾರ್ಯತೆ ಎಂದಿಗಿಂತಲೂ ಈಗ ಹೆಚ್ಚಾಗಿದೆ. ಸಾಕಷ್ಟು ಮಹಾವಿದ್ಯಾಲಯಗಳು ಈಗಾಗಲೇ ಸ್ವಾಯತ್ತತೆಯನ್ನು ಪಡೆದಿದ್ದು, ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಇಂತಹ ಮಹಾವಿದ್ಯಾಲಯಗಳಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯವು ಒಂದು. ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ್ ಬಿಲಗುಂದಿಯವರು ಹಾಗೂ ಆಡಳಿತ ಮಂಡಳಿಯವರು ಇಂತಹ ಶಿಕ್ಷಣ ವ್ಯವಸ್ಥೆಯನ್ನು ಪೂಜ್ಯ ದೊಡ್ಡಪ್ಪ ಅಪ್ಪಾ ಮಹಾವಿದ್ಯಾಲಯದಲ್ಲಿ ನೀಡಲು ಪ್ರಾಂಶುಪಾಲರು, ಡೀನರು, ವಿಭಾಗ ಮುಖ್ಯಸ್ಥರುಗಳ ಜೊತೆ ಸತತ ಸಮಾಲೋಚನೆ ನಡೆಸಿ ಅತ್ಯಂತ ಕಡಿಮೆ ಸಮಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ.

ಮಹಾವಿದ್ಯಾಲಯ ಹಾಗೂ ಉದ್ಯಮಕ್ಷೇತ್ರದವರನ್ನು ಒಟ್ಟುಗೂಡಿಸಿ ವಿವಿಧ ಕಾರ್ಯಗಾರಗಳನ್ನು ಏರ್ಪಡಿಸಲಾಗುತ್ತದೆ. ಅನೇಕ ಕಂಪನಿಗಳು ಮಹಾವಿದ್ಯಾಲಯದಲ್ಲಿ ತಮ್ಮ ಸ್ಟಾರ್ಟಅಪ್ ಸೆಲ್‍ಗಳನ್ನು ಆರಂಭ ಮಾಡಿವೆ. ಈ ಸ್ಟಾರ್ಟ ಅಪ್ ಸೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ನೀಡಲಾಗುತ್ತಿದೆ. ಮಹಾವಿದ್ಯಾಲಯದ ಅಟೋಮೋಬೈಲ್ ಇಂಜಿನಿಯರಿಂಗ್ ವಿಭಾಗವು ಈ ದಿಸೆಯಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದ್ದು, ಒಂದು ಸ್ಟಾರ್ಟಅಪ್ ಸೆಲ್‍ನ್ನು ಪ್ರಾರಂಭ ಮಾಡಿದ್ದು, ಅಟೋಕ್ಯಾಡ್, ಫ್ಯೂಜನ್ 360, ಮುಂತಾದ ವಿಷಯಗಳಲ್ಲಿ ತರಬೇತಿಯನ್ನು ನೀಡುವ ಉದ್ದೇಶವನ್ನು ಒಡಂಬಡಿಕೆ ಹೊಂದಿದೆ.
ಅಟೋಮೋಬೈಲ್ ವಿಭಾಗದ ಪ್ರಾಯೋಗಿಕ ವಿಭಾಗಕ್ಕೆ ಹೆಚ್ಚಿನ ಕಳೆ ತರಲು ವಿವಿಧ ಅಟೋಮೋಬೈಲ್ ಕಂಪೆನಿಗಳ ಸಹಾಯವನ್ನು ಕೋರಲಾಗಿದೆ. ಅಂತೆಯೇ ಟೊಯೊಟೊ ಕಂಪೆನಿಯ ಡೀಲರ್‍ಗಳಾದ ಒ/S ಕರುಣಾ ಟೋಯೋಟಾ, ಕಲಬುರಗಿ ಇವರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ. ಒಡಂಬಡಿಕೆಯ ಮುಖ್ಯ ಉದ್ದೇಶ, ಅಟೋಮೋಬೈಲ್ ವಿದ್ಯಾರ್ಥಿಗಳಿಗೆ ಇತ್ತೀಚಿನ ಅಭಿವೃದ್ಧಿಗಳ ಬಗ್ಗೆ ಮಾಹಿತಿ ನೀಡುವುದು, ಪ್ರಾಯೋಗಿಕ ಜ್ಞಾನ ನೀಡುವುದು ಹಾಗೂ ಟೋಯೋಟಾ ಕಂಪೆನಿಯವರಿಂದ ಕಾರ್ಯಗಾರಗಳನ್ನು ಏರ್ಪಡಿಸುವುದು ಸಹ ಒಡಂಬಡಿಕೆಯಲ್ಲಿ ಸೇರಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here