ಕಲಬುರಗಿ: ಜಿಲ್ಲೆಯ ಕಮಲಾಪೂರ್ ತಾಲ್ಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ ಪಿಯು ಕಾಲೇಜು ವಿಭಾಗದಿಂದ ಉಪನ್ಯಾಸಕ ಚಂದ್ರಕಾಂತ್ ಸನದಿ ಅವರು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಪುಂಡಲೀಕ್ ಚಿರಡೆ ಅವರು ತಿಳಿಸಿದ್ದಾರೆ.
ಸಂಘದ ಒಟ್ಟು 35 ಸ್ಥಾನಗಳಲ್ಲಿ 32 ಸ್ಥಾನಗಳು ಅವಿರೋಧ ಆಯ್ಕೆ ಮಾಡಲಾಗಿದೆ. ಎರಡು ಸ್ಥಾನಗಳಿಗೆ ಯಾರು ನಾಮಪತ್ರ ಸಲ್ಲಿಸಿಲ್ಲ. ಕೇವಲ ಪಿಯು ಕಾಲೇಜು ವಿಭಾಗದಿಂದ ಒಂದು ಸ್ಥಾನಕ್ಕೆ ಮಾತ್ರ ಈ ಚುನಾವಣೆ ನಡೆದಿತ್ತು. ಇದರಲ್ಲಿ ಮಹಾಗಾಂವ್ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚಂದ್ರಕಾಂತ್ ಸನದಿ ಅವರು 13 ಮತಗಳಿಂದ ಗೆಲವು ಸಾಧಿಸಿದರು. ಅವರ ವಿರುದ್ಧ ಸ್ಪರ್ದಿದಿಸಿದ ಕಮಲಾಪೂರ್ ಕಾಲೇಜಿನ ಎಚ್,ಎಸ್, ಬೇನಾಳ್ ಅವರು ಸೋಲು ಅನುಭವಿಸಿದರು.
ಚಂದ್ರಕಾಂತ್ ಸನದಿ ಅವರು ಈ ಮೊದಲು ಆಳಂದ್ ನೌಕರ ಸಂಘದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಈಗ ಕಮಲಾಪೂರ್ ಸರ್ಕಾರಿ ನೌಕರ ಸಂಘಕ್ಕೆ ಆಯ್ಕೆಯಾಗಿದ್ದು, ಈಗ ಬರುವ ದಿನಗಳಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದಾರೆ.
ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆಲವು ಸಾಧಿಸಿದ ಏಕೈಕ ಅಭ್ಯರ್ಥಿ ಸನದಿ ಅವರಿಗೆ ಪ್ರಿನ್ಸಿಪಾಲ್ ಮಲ್ಲೇಶಿ ನಾಟೀಕಾರ್, ಘ್ಯಾನೋಬಾ ಶಿಂದೆ, ಜಿ,ಪಿ ಬೂಸಾಳೆ, ಶರಣಗೌಡ ಪಾಟೀಲ್, ನಾಗೇಶ್ ದೇಗಾಂವ್, ಅನುರಾಧಾ ಕೆ, ಕಾಶೀಬಾಯಿ ಸಾಹು ಮುಂತಾದವರು ಅಭಿನಂದಿಸಿದ್ದಾರೆ.