ಕಲಬುರಗಿ: ಬಸವೇಶ್ವರ ಸಹಕಾರ ಬ್ಯಾಂಕನ ಉಪಾಧ್ಯಕ್ಷರಾದ ಎಂ.ಡಿ.ಪಾಟೀಲ್ ಅವರನ್ನು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಆಡಳಿತ ಮಂಡಳಿಗೆ ಅವಿರೋದವಾಗಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದಕ್ಕೆ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದಿಂದ ಸನ್ಮಾನಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಚಂದ್ರಶೇಕರ ತಳ್ಳಳಿ, ಸಿದ್ದಪ್ಪಾ ದೇವರಮನಿ, ಆರ್.ಜಿ.ಶೆಟಗಾರ, ಧರ್ಮಪ್ರಕಾಶ ಪಾಟೀಲ್, ಸಿದ್ರಾಮಪ್ಪ ಪಾಟೀಲ್, ಸುಭಾಷ ಕಿರಾಣಿ, , ಶಿವಲಿಂಗಪ್ಪ ಬಂಡಕ, ಆರ್.ಎಸ್.ಬಿರಾದರ, ವೀರುಪಾಕ್ಷಯ್ಯಾ ಮಠಪತಿ, ಸಾವಿತ್ರಿ ಕುಳಗೇರಿ, ಶುಶಿಲಾಬಾಯಿ ಡಿ ಪಾಟೀಲ್, ಪದ್ಮಾಜಿ ಗುಂಡೇರಾವ, ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.