ಸುರಪುರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಕರೆ ನೀಡಿರುವ ನಿಧಿ ಸಮರ್ಪಣಾ ಅಭಿಯಾನವನ್ನು ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ನಡೆಸಲಾಯಿತು.ಅಭಿಯಾನದ ಆರಂಭದ ಪೂರ್ವದಲ್ಲಿ ಗ್ರಾಮದ ಮಾರುತಿ ಮಂದಿರದಲ್ಲಿ ಪೂಜೆಯನ್ನು ನೆರವೇರಿಸಿ ನಂತರ ಶ್ರೀರಾಮನ ಕಟೌಟ್‌ಗೆ ಪೂಜೆ ಸಲ್ಲಿಸಿ ನಮಿಸಿ ನಂತರ ಅಭಿಯಾನವನ್ನು ಆರಂಭಿಸಿದರು.
ಗ್ರಾಮದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ಹಾಗು ಮನೆಗಳಿಗೆ ಭೇಟಿ ನೀಡಿ ನಿಧಿ ಸಂಗ್ರಹಣೆಯನ್ನು ಮಾಡಲಾಯಿತು.ನಂತರ ಮಾರುತಿ ಮಂದಿರದಲ್ಲಿ ಸಭೆಯನ್ನು ನಡೆಸಿ ಯುವ ಮುಖಂಡ ಮಲ್ಲಿಕಾರ್ಜುನರಡ್ಡಿ ಕೋಳಿಹಾಳ ಮಾತನಾಡಿ,ನಮ್ಮ ಭಾರತ ದೇಶದ ಧಾರ್ಮಿಕ ಸಂಕೇತವಾಗಿರುವ ಶ್ರೀರಾಮನ ಮಂದಿರವನ್ನು ಆತನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ನಿರ್ಮಾಣಕ್ಕೆ ಈಗಾಗಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ.
ಅಲ್ಲದೆ ನಮ್ಮ ತಾಲೂಕಿನಲ್ಲಿಯೂ ನಿಧಿ ಸಮರ್ಪಣಾ ಅಭಿಯಾನಕ್ಕೆ ಶಾಸಕ ರಾಜುಗೌಡರು ಚಾಲನೆ ನೀಡಿದ್ದಾರೆ,ಅದರಂತೆ ನಮ್ಮ ಗ್ರಾಮದಿಂದಲೂ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸಿ ಕೊಡುವ ಮೂಲಕ ರಾಮ ಭಕ್ತಿಯನ್ನು ಮೆರೆಯೋಣ ಎಂದರು.ಇದೇ ಸಂದರ್ಭದಲ್ಲಿ ಅನೇಕರು ನಿಧಿಗೆ ಧನ ಸಮರ್ಪಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಪಸಲಾದಿ ಅಯ್ಯಪ್ಪ ರಾಮನರ ಹಣಮಂತ ಪ್ಯಾಟಿ ನಿಂಗಪ್ಪಗೌಡ ಪೊಲೀಸ್ ಪಾಟೀಲ್ ಮುದ್ದಪ್ಪ ತನಿಕೇರಾದ ಪ್ರಕಾಶ ಸಮೇದ ಸೇರಿದಂತೆ ಅನೇಕರಿದ್ದರು.