ನೆರೆಹಾ‌ನಿ‌ ಪರಿಹಾರ ಬಿಡುಗಡೆಯಲ್ಲಿ ಕೇಂದ್ರ ಸರಕಾರ ವಿಫಲ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ

0
70

ಕಲಬುರಗಿ: ರಾಜ್ಯದಲ್ಲಿ ಪ್ರವಾಹದಿಂದ ರೂ 35,000 ಕೋಟಿ ಹಾನಿ ಆಗಿದೆ ಎಂದು ಸರಕಾರ ಕೇಂದ್ರಕ್ಕೆ ವರದಿ ಸಲ್ಲಿಸಿದ್ದು ಅದರಲ್ಲಿ ರೂ 1860 ಕೋಟಿ ಮಾತ್ರ ಬಿಡುಗಡೆಯಾಗಿದೆ.‌ ಇದು ಪರಿಹಾರ ಬಿಡುಗಡೆ ಮಾಡುವ ರೀತಿನಾ? ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಕೇಂದ್ರ ಸರಕಾರ ವಿರುದ್ದ ಹರಿಹಾಯ್ದರು.

ಕಲಬುರಗಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡುತ್ತಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಅಧಿಕಾರದಲ್ಲಿದ್ದರೆ ಡಬಲ್ ಇಂಜಿನ್ ಸರಕಾರ ಇದ್ದಂತೆ  ಅಭಿವೃದ್ದಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ, ಪರಿಹಾರ ಬಿಡುಗಡೆಯಲ್ಲಿ ಅನ್ಯಾಯ. ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (J) ಅಡಿಯಲ್ಲಿ ಯುವಕರಿಗೆ ಉದ್ಯೋಗ ದೊರಕಿಸಿಲ್ಲ. ವಾರ್ಷಿಕ ಕಕ ಅಭಿವೃದ್ದಿ ಮಂಡಳಿಗೆ ಒದಗಿಸಬೇಕಿದ್ದ ರೂ 1500 ಕೋಟಿಯಲ್ಲಿ ರೂ 1134 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಬಿಡುಗಡೆ ಮಾಡಿದ್ದು ಕೇವಲ ರೂ‌250 ಕೋಟಿ ಮಾತ್ರ. ಇದನ್ನು ಅಭಿವೃದ್ಧಿ ಎನ್ನಬೇಕಾ? ಡಬಲ್ ಇಂಜಿನ್ ಎಲ್ಲಿದೆ? ಒಂದೇ ಇಂಜಿನ್ ಕೂಡಾ ಕೆಲಸ ಮಾಡುತ್ತಿಲ್ಲ, ಇಂಜಿನ್ ಫೇಲಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಈ ಭಾಗದಲ್ಲಿ ಹೆಚ್ಚಿನ ಬಿಜೆಪಿ ಶಾಸಕರು ಗೆದ್ದು ಬಂದಿದ್ದಾರೆ. ಅವರಿಗೆ ವಿಧಾನಸೌಧದಲ್ಲಿ ಅಧಿಕಾರ‌ ಇಲ್ಲ. ಜನರಿಗೆ ಏನೂ ಲಾಭವಿಲ್ಲ ಇದನ್ನು ನೊಂದ ಶಾಸಕರೇ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 2021 ವರ್ಷವನ್ನು ಕಾಂಗ್ರೆಸ್ ಹೋರಾಟದ ವರ್ಷವನ್ನಾಗಿ ಮಾಡುತ್ತಿದೆ. ಪಕ್ಷವನ್ನು ತಳಮಟ್ಟದಿಂದ ಕಟ್ಟುಲಾಗುತ್ತದೆ. ಬ್ಲಾಕ್ ಮಟ್ಟದಿಂದ ಪಕ್ಷದ ಕಾರ್ಯಕರ್ತರು ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸರಕಾರದ ವಿರುದ್ದ ದೊಡ್ಡ ಹೋರಾಟ ರೂಪಿಸಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು.

ಕೇಂದ್ರ ಸರಕಾರದ ಮೂರು ರೈತರ ವಿರೋಧಿ ಕಾಯಿದೆಗಳ ವಿರುದ್ದ 20 ರಂದು ರಾಜಭವನ ಚಲೋ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ನಮ್ಮ ಹೋರಾಟ ಶುರುವಾಗಲಿದೆ ಎಂದರು. ಮಹಾರಾಷ್ಟ್ರ ಸಿಎಂ ಹೇಳಿಕೆ‌ ಕುರಿತು‌ ಕಾಂಗ್ರೆಸ್ ಮೃದುಧೋರಣೆ ಹೊಂದಿದೆಯಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಮೃದ ಧೋರಣಸ ಹೊಂದಿಲ್ಲ.ಮಹಾಜನ್ ವರದಿಯೇ ಅಂತಿಮ ಒಂದು ಇಂಚು ಭೂಮಿಯನ್ನು ಬಿಟ್ಟುಕೊಡಲ್ಲ. ಒಂದು‌ ಇಂಚು ಭೂಮಿ ತಗೋಳೋದಿಲ್ಲ ಎಂದರು.

ಇಂದು ನಡೆದ ಸಭೆಯಲ್ಲಿ ಪಕ್ಷದ ಎಲ್ಲ ಹಂತದ ನಾಯಕರು ಅದರಲ್ಲೂ ಮಹಿಳೆಯರು ಬಹಳ ಉಪಯುಕ್ತ ಸಲಹೆಗಳನ್ನು ಕೊಟ್ಟಿದ್ದಾರೆ ಅವರ ಸಲಹೆಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುತ್ತದೆ. ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲಿ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

\ಬಸವಕಲ್ಯಾಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷೆ ಹೊಂದಿರುವವರ ಸಭೆಯನ್ನು ಇದೇ ತಿಂಗಳು 20 ರಂದು ಕರೆದಿದ್ದೇನೆ. ಅಂದು ನನ್ನ ವರದಿಯನ್ನು ಹೈಕಮಾಂಡ್ ಗೆ ಕಳಿಸುತ್ತೇನೆ ಎಂದು ಶಿವಕುಮಾರ್ ಹೇಳಿದರು. ಎಚ್ ವಿಶ್ವನಾಥ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಸ್ತಾಪಿಸಿರುವ ಸಿಡಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಆಯ್ತು ಮುಂದೆ ಹೇಳೋಣ ಎಂದು ಸಂಕ್ಷಿಪ್ತ ವಾಗಿ ಉತ್ತರಿಸಿದರು. ನನಗೆ ಸಂಪೂರ್ಣ ಬಹುಮತ ಕೊಡಿ ಪಂಚರತ್ನ ಸರಕಾರ ಕೊಡುತ್ತೇನೆ ಎಂದು ಎಚ್ ಡಿ‌ ಕುಮಾರಸ್ವಾಮಿ ಅವರ ಹೇಳಿದ್ದಾರಲ್ಲ ? ಎಂದು ಕೇಳಿದ ಪ್ರಶ್ನೆಗೆ ಚುಟುಕಾಗಿ‌ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷರು ಅವರಿಗೆ ಒಳ್ಳೆಯದಾಗಲಿ ಎಂದರು.

ಈ‌ ಸಂದರ್ಭದಲ್ಲಿ ಮಾಜಿ ಸಚಿವರು, ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಹಾಗೂ ಶಾಸಕರಾದ ಅಜಯ್ ಸಿಂಗ್ ಮಾಜಿ ಸಚಿವರಾದ ಡಾ ಶರಣಪ್ರಕಾಶ್ ಪಾಟೀಲ್, ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಇದ್ದರು ಅವರು ಕೂಡಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here