ಕಲಬುರಗಿ: ರಾಜ್ಯ ಸರಕಾರ ರಾಜ್ಯಾದ್ಯಂತ ಶಾಲಾ-ಕಾಲೇಜ ಆರಂಭಿಸಿರುವ ಬೆನ್ನಲ್ಲೆ ರಾಜ್ಯದ ಎಲ್ಲಾ ಶಾಲಾ-ಕಾಲೇಜ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಹೋಗಿಬರಲು ತುಂಬ ಕಷ್ಟವಾಗುತ್ತದೆ, ಈ ಕಾರಣಕ್ಕಾಗಿ ರಾಜ್ಯ ಸರಕಾರ ಕೂಡಲೇ ರಾಜ್ಯದ ಎಲ್ಲಾ ಹಳ್ಳಿ-ಹಳ್ಳಿಗಳಿಗೂ ಬಸ್ ಸಂಚಾರ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಪರಿಹರಿಸಿ ಎಲ್ಲಾ ಹಳ್ಳಿಗಳಿಗೆ ವಿದ್ಯಾರ್ಥಿಗಳಿಗೊಸ್ಕರ ಬಸ್ ಸಂಚಾರ ಆರಂಭಿಸಲು ಕರ್ನಾಟಕ ವಿಜಯ ಸೇನೆ ಜಿಲ್ಲಾಧ್ಯಕ್ಷರಾದ ರಾಜು ಎಮ್ ಹಿರೇಮಠ ಆಗ್ರಹಿಸಿದ್ದಾರೆ.
ಅವರು ನಗರದ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡುತ್ತಾ, ಕರೋನಾ ಸಂದರ್ಭದಲ್ಲಿ ಎಲ್ಲಾ ಹಳ್ಳಿಗಳಿಗೆ ಬಸ್ ಸಂಚಾರ ಸ್ಥಗಿತಗೊಳಿಸಿದ ರಾಜ್ಯ ಸರಕಾರ, ಸದ್ಯ ಕರೋನಾ ವೈರಸನ ಹರಡುವಿಕೆ ಕಡಿಮೆ ಆಗುತ್ತಿರುವದನ್ನು ಗಮನಿಸಿ ಕೆಲವು ಕಡೆ ಬಸ್ ಸಂಚಾರ ಆರಂಭಿಸಿದ್ದು. ಇನ್ನು ಸುಮಾರು ಹಳ್ಳಿಗಳಿಗೆ ಬಸ್ ಸಂಚಾರ ಆರಂಭಿಸಿದ್ದು, ಸರಿಯಾದ ಸಮಯಕ್ಕೆ ಬಸ್ ಸಂಚಾರ ಮಾಡುತ್ತಿಲ್ಲಾ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ಮಾತು ಸಹ ಕೇಳಿ ಬರುತ್ತಿದ್ದು, ಇನ್ನು ಕೆಲವು ಹಳ್ಳಿಗಳಿಗೆ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಪ್ರಯಾಣಿಕರಿಗೆ, ಹಾಗೂ ದಿನಾಲು ಶಾಲಾ-ಕಾಲೇಜಿಗೆ ಹೋಗಿಬರುವ ವಿದ್ಯಾರ್ಥಿಗಳಿಗಂತೂ ತುಂಬಾ ಕಷ್ಟವಾಗುತ್ತಿದ್ದು. ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೂಡಲೆ ಅಗತ್ಯ ಕ್ರಮ ತೆಗೆದುಕೊಂಡು ಎಲ್ಲಾ ಹಳ್ಳಿಗಳಿಗೂ ಬಸ್ ಸಂಚಾರ ಆರಂಭಿಸಿ, ಹಳ್ಳಿಯಿಂದ ಪಟ್ಟಣಕ್ಕೆ ಹೋಗಿ ಬರುವ ವಿದ್ಯಾರ್ಥಿಳಿಗೆ ಹಾಗೂ ಬಡ ಪ್ರಯಾಣಿಕರಿಗೆ ತೊಂದರೆ ಆಗದ ರೀತಿಯಲ್ಲಿ ಹಳ್ಳಿಗಳಿಗೆ ಬಸ್ ಸಂಚಾರ ಪ್ರಾರಂಬಿಸಬೇಕೆಂದು ಅವರು ತಿಳಿಸಿದರು.
ಸರಕಾರ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಕೂಡಾ ಮಾಡುತ್ತಿದ್ದಾರೆ,
ಸರಕಾರ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಕೂಡಾ ಮಾಡುತ್ತಿದ್ದಾರೆ, ಬಸ್ ಪಾಸ ವಿತರಣೆ ಮಾಡಿದ ಎಲ್ಲಾ ಹಳ್ಳಿಗಳಿಗೆ ಕಡ್ಡಾಯವಾಗಿ ಬಸ್ ಸಂಚಾರ ಆರಂಭವಾಗಬೇಕು, ದಿನಾಲು ಹಳ್ಳಿಯಿಂದ ಪಟ್ಟಣಕ್ಕೆ ಹೋಗಿಬಂದು ಮಾಡುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಬಾರದೆ ಇರುವುದರಿಂದ ಕಷ್ಟವಾಗುತ್ತಿದ್ದು, ಕೆಲವು ವಿದ್ಯಾರ್ಥಿಗಳು ಸ್ವಂತ ವಾಹನದಲ್ಲಿ ಶಾಲಾ-ಕಾಲೇಜಿಗೆ ಹೋಗಿ ಬರುತ್ತಿದ್ದು, ಬಡ ವಿದ್ಯಾರ್ಥಿಗಳು ಹೇಗೆ ಹೋಗಬೇಕು, ಬಡತನದಲ್ಲಿ ಉನ್ನತ ಶಿಕ್ಷಣದ ಕನಸ್ಸು ಕಂಡ ವಿದ್ಯಾರ್ಥಿಗಳ ಜೀವನಕ್ಕೆ ಇದು ಮಾರಕವಾಗಬಹುದೆಂದು ಅವರು ಮಾತನಾಡುತ್ತಾ, ಸರಕಾರ ಬಸ್ ಸಂಚಾರ ಆರಂಭಿಸದಿದ್ದಲ್ಲಿ ವಿದ್ಯಾರ್ಥಿಗಳ ಒಕ್ಕೂಟದಿಂದ ಧರಣಿ ಸತ್ಯಾಗ್ರಹಕ್ಕೆ ಮುಂದಾಗಬೇಕೆಂದು ವಿದ್ಯಾರ್ಥಿಗಳ ಒಕ್ಕೂಟಕ್ಕೆ ತಿಳಿಸಿದರು.