ಶಹಾಬಾದ:ನಗರದ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕಾ ಆಸ್ಪತ್ರೆಯನ್ನಾಗಿ ಮೇಲ್ದರ್ಜಗೇರಿಸಿ, ಅಗತ್ಯ ಮೂಲಭೂತ ಅವಶ್ಯಕತೆಗಳನ್ನು ಪೂರೈಸಬೇಕೆಂದು ಆಗ್ರಹಿಸಿ ನಗರದ ಯುವ ಮುಖಂಡರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಕ್ಬರ್ ಚಿಟ್ ಹಾಗೂ ಮಹ್ಮದ್ ಅಜರ್, ಶಹಾಬಾದ ನಗರದ ತಾಲೂಕಾ ಕೇಂದ್ರವಾಗಿದೆ.ಇಲ್ಲಿ ತಾಲೂಕಾ ಆಸ್ಪತ್ರೆಗೆ ಬೇಕಾದ ಜನಸಂಖ್ಯೆಯೂ ಹೊಂದಿದೆ.ಆದರೆ ಇಲ್ಲಿಯವರೆಗೆ ಯಾವುದೇ ಸರ್ಕಾರ ಹಾಗೂ ಅಧಿಕಾರಿಗಳು ಗಮನಹರಿಸಿಲ್ಲ. ತಾಲೂಕಾ ಕೇಂದ್ರವಾದ ಬಳಿಕ ಜನರಿಗೆ ಅತ್ಯವಶ್ಯಕವಾದ ಆಸ್ಪತ್ರೆಗೆ ಇದಾಗಿದೆ.ಅಲ್ಲದೇ ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಸಂಜೀವಿನಿ.ಆದ್ದರಿಂದ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕಾ ಆಸ್ಪತ್ರೆಯನ್ನಾಗಿ ಮೇಲ್ದರ್ಜಗೇರಿಸಲು ಕ್ರಮಕೈಗೊಳ್ಳಲು ಆಗ್ರಹಿಸಿದಲ್ಲದೇ, ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞೆ ,ಅರಿವಳಿಕೆ ತಜ್ಞರನ್ನು ನೇಮಿಸಬೇಕು.ಅಲ್ಲದೇ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಲು ಸಾಕಷ್ಟು ಸುಲಿಗೆ ನಡೆಯುತ್ತಿದೆ.ಆದ್ದರಿಂದ ಇಲ್ಲಿನ ಬಡ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಳ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡುವ ಸೌಲಭ್ಯವನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಹೀಮ್, ಮಹ್ಶಮದ ಮಸ್ತಾನ, ಶಕೀಲ್, ಅರಿಫ್, ಶಾರೂಖ, ಸೇರಿದಂತೆ ಅನೇಕ ಜನರು ಹಾಜರಿದ್ದರು.