ರಾಜಭವನ ಚಲೋ, ರೈತ ವಿರೋಧಿ ಸರಕಾರದ ಅಂತ್ಯಕ್ಕೆ ಮುನ್ನುಡಿ: ಪ್ರಿಯಾಂಕ್ ಖರ್ಗೆ

0
33

ಬೆಂಗಳೂರು/ಕಲಬುರಗಿ: ಕೇಂದ್ರ ಕೃಷಿ ಕಾಯಿದೆಗಳ ವಿರುದ್ದ ರೈತರು ನಡೆಸುತ್ತಿರುವ ಹೋರಾಟ ಹಾಗೂ ಕಾಂಗ್ರೆಸ್ ಪಕ್ಷದಿಂದ ನಡೆಸಲಾಗುತ್ತಿರುವ ರಾಜಭವನ ಚಲೋ ಪ್ರತಿಭಟನೆಯನ್ನು ಉಲ್ಲೇಖಿಸಿ, ಟ್ವಿಟ್ ಮಾಡಿರುವ ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು  ಬಿಜೆಪಿ ಸರಕಾರ ತನ್ನ ಅಹಂಕಾರಕ್ಕೆ ಅತೀ ಶೀಘ್ರದಲ್ಲಿಯೇ ತಕ್ಕ ಪ್ರತಿಫಲ ಅನುಭವಿಸಲಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.

ರೈತರ ಈ ಹೋರಾಟ ಕಠಿಣವಾದ ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯುವವರೆಗೆ ನಿಲ್ಲುವುದಿಲ್ಲ ಎಂದು ಎಚ್ಚರಿಸಿರುವ ಅವರು ರಾಜಭವನ ಚಲೋ ಕಾರ್ಯಕ್ರಮ ರೈತವಿರೋಧಿ ಸರಕಾರ ಕೊನೆಗಾಣಿಸಲು ಮುನ್ನುಡಿಯಾಗಲಿದೆ ಎಂದು ಟ್ವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಅವರು ರಾಜಭವನ ಚಲೋ ಪ್ರತಿಭಟನೆಯ ಫೋಟೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here