ಶಹಾಬಾದ:ನಗರದ ವಾರ್ಡ ನಂ. ೨೫ ಮತ್ತು ೨೬ ರಲ್ಲಿ ಡಾಂಬರ್ ರಸ್ತೆ ನಿರ್ಮಾಣಕ್ಕೆ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ವಾರ್ಡ ನಂ. ೨೫ ರ ಸದಸ್ಯೆಯಾದ ನಾನು ಹಾಗೂ ವಾರ್ಡ ನಂ. ೨೬ ರ ಸದಸ್ಯೆ ರಾಣಿ ರಾಜು ಪವಾರ ಪ್ರದೇಶದಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಸುಮಾರು ೩೩ ಲಕ್ಷ ರೂ.ಅನುದಾನದಲ್ಲಿ ಡಾಂಬರೀಕರಣ ರಸ್ತೆ ನಿರ್ಮಾಣವಾಗಲಿದೆ.
ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದಲ್ಲಿ ಯಾವುದೇ ರಾಜೀಯಿಲ್ಲ. ರಸ್ತೆ ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ಕೈಗೊಳ್ಳಲು ವಾರ್ಡ ಜನರು ಸಹಕರಿಸಬೇಕು ಹಾಗೂ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಬೇಕು ಹಾಗೂ ಅಧಿಕಾರಿಗಳು ಸಹ ಕಳಪೆ ಕಾಮಗಾರಿಯಾಗದಂತೆ ನಿಗಾವಹಿಸಬೇಕು ಎಂದು ಸೂಚಿಸಿದ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ.ಅಲ್ಲದೇ ಇನ್ನೂ ಕೂಡ ಮಾಡಲಾಗುತ್ತದೆ ಎಂದರು.ಈ ಬಾರಿ ಹೆಚ್ಚು ಮಳೆ ಬಂದಾಗ ಹಳ್ಳ ಬಂದು ನೀರಿನ ಒಡೆತಕ್ಕೆ ಸಹ ರಸ್ತೆ ಹಾಳಗಿದ್ದರಿಂದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ರಸ್ತೆ ಡಾಂಬರೀಕರಣಗೊಳಿಸಲು ಮುಂದಾಗಿದ್ದೆವೆ ಎಂದು ಹೇಳಿದರು.
ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ಮುಖಂಡರಾದ ರಾಕೇಶ ಪವಾರ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರ ಚವ್ಹಾಣ, ಕಾಶಿನಾಥ ಜೋಗಿ,ಬಾಕ್ರೋದ್ದಿನ್, ಜಾವೀದ್, ಸಾಹೇಬ,ಅವಿನಾಶ ಕಂಬಾನೂರ, ಅಜರ್ ಸೇಠ, ಭರತ್ ರಾಠೋಡ,ಪಾಷಾಸಾಬ, ಮೌಲಾನಾ ಸಾಬ ಸೇರಿದಂತೆ ಗುತ್ತಿಗೆದಾರ ಮನೋಹರ್ ಇದ್ದರು.