ಸುರಪುರ: ತಾಲೂಕಿನಾದ್ಯಂತ ನಿತ್ಯವು ವಿದ್ಯೂತ್ ಕಡಿತಗೊಳ್ಳುತ್ತಿದ್ದು ಇದರಿಂದ ತಾಲೂಕಿನ ಜನತೆ ಬೇಸತ್ತು ಹೋಗಿದ್ದಾರೆ. ತಾಲೂಕಿನಲ್ಲಿ ಒಂದೇ ಮುಖ್ಯ ವಿತರಣಾ ಕೇಂದ್ರ ಹಾಗು ಒಬ್ಬರೆ ಸಹಾಯಕ ಅಭಿಯಂತರರು ಇಡೀ ತಾಲೂಕನ್ನು ನೋಡಿಕೊಳ್ಳುವುದುರಿಂದ ಎಲ್ಲಕಡೆಗೆ ಒಬ್ಬರೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ತಾಲೂಕಿನ ಜನರು ತೀವ್ರ ವಿದ್ಯೂತ್ ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ ಈಗಿರುವ ಎಇಇ ಅನೇಕ ವರ್ಷಗಳಿಂದ ಇಲ್ಲಿಯೇ ಬೀಡುಬಿಟ್ಟಿದ್ದು ಇದರಿಂದಾಗಿ ಅವರು ಜನರ ಸಮಸ್ಯೆಗೆ ಕೇರ್ ಮಾಡುತ್ತಿಲ್ಲ,ಯಾರೇ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ,ಯಾರು ಏನು ಮಾಡುತ್ತಾರೆ ಎಂಬ ನಿರ್ಲಕ್ಯ ಇವರಲ್ಲಿದ್ದು ಜನರು ಸಂಕಷ್ಟ ಪಡುವಂತಾಗಿದೆ.
ಆದ್ದರಿಂದ ಈಗಿರುವ ಎಇಇಯವರನ್ನು ಬೇರೆಡೆಗೆ ವರ್ಗಾಯಿಸಬೇಕು ಹಾಗು ತಾಲೂಕಿನ ನಾಲ್ಕು ಭಾಗದಲ್ಲಿ ಅಂದರೆ ದೇವರಗೋನಾಲ ಪೇಠ ಅಮ್ಮಾಪುರ ದೇವಾಪುರ ಹಾಗು ಖಾನಾಪುರ ಎಸ್.ಹೆಚ್‌ನಲ್ಲಿ ವಿದ್ಯೂತ್ ಉಪ ಕೇಂದ್ರಗಳನ್ನು ಸ್ಥಾಪಿಸಿದರೆ ತಾಲೂಕಿನ ವಿದ್ಯೂತ್ ಸಮಸ್ಯೆ ನಿವಾರಣೆಯಾಗಲಿದೆ,ಇಲ್ಲವಾದಲ್ಲಿ ಗ್ರಾಮೀಣ ಭಾಗದ ಜನರು ಹಾಗು ರೈತರು ವಿದ್ಯೂತ್ ಇಲ್ಲದೆ ಬೆಳೆ ನಷ್ಟಕ್ಕೊಳಗಾಗುತ್ತಾರೆ.
ಆದ್ದರಿಂದ ಈ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಲೋಕ ಜನಶಕ್ತಿ ಪಕ್ಷ ಆಗ್ರಹಿಸುತ್ತದೆ,ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಇಂಧನ ಸಚಿವರಿಗೆ ಬರೆದ ಮನವಿಯಲ್ಲಿ ಆಗ್ರಹಿಸಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರ ಮೂಲಕ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದುರ್ಗಪ್ಪ ಬಡಿಗೇರ ನಾಗರಾಳ ಇತರರು ಇದ್ದರು.