ವಸತಿ ನಿಲಯಗಳನ್ನು ಸ್ವಚ್ಛವಾಗಿಡಿ: ರಮೇಶ ಸಂಗಾ

0
119

ಕಲಬುರಗಿ: ಕೋವಿಡ್-19 ಲಾಕ್‍ಡೌನ್ ಮರು ತೆರವಿನ ನಂತರ ರಾಜ್ಯದಲ್ಲಿ ದ್ವಿತೀಯ ಪಿಯುಸಿ, ಸ್ನಾತಕೋತ್ತರ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಇತರೆ ತರಗತಿಯ ನವೀಕರಣ ವಿದ್ಯಾರ್ಥಿಗಳಿಗೆ ಜನವರಿ 15 ರಿಂದಲೇ ಭೌತಿಕವಾಗಿ ತರಗತಿಗೆ ಹಾಜರಾಗಲು ರಾಜ್ಯ ಸರ್ಕಾರವು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಸದರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಇಲಾಖೆಯ ವಸತಿ ನಿಲಯದ ನಿಲಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕಾಗಿರುವ ಕಾರಣ ಇಲಾಖೆಯ ವಸತಿ ನಿಲಯಗಳನ್ನು ಸಂಪೂರ್ಣವಾಗಿ ಸೋಡಿಯಂ ಹೈಪೆÇೀಕ್ಲೋರೈಟ್ ದ್ರಾವಣ ಬಳಸಿ ಸ್ವಚ್ಛ ಮಾಡಿಯೇ ವಿದ್ಯಾರ್ಥಿಗಳಿಗೆ ಪ್ರವೇಶವಕಾಶ ನೀಡಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಮೇಶ ಸಂಗಾ ಅವರು ಇಲಾಖೆಯ ವಸತಿ ನಿಲಯಗಳ ಸಿಬ್ಬಂದಿಗಳಿಗೆ ಸೂಚಿಸಿದರು.

ಗುರುವಾರ ಕಲಬುರಗಿ ನಗರದ ಐವಾನ್ ಶಾಹಿ ರಸ್ತೆಯಲ್ಲಿರುವ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಮೆಟ್ರಿಕ್ ನಂತರ ವಸತಿ ನಿಲಯಗಳು ಪುನರ್ ಪ್ರಾರಂಭಿಸುವ ಕುರಿತು ಕಲಬುರಗಿ ತಾಲೂಕಿನ ವಸತಿ ನಿಲಯಗಳ ಮೇಲ್ವಿಚಾರಕರು, ಅಡುಗೆ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಗಳಿಗೆ ವಸತಿ ನಿಲಯ ಪುನರ್ ಪ್ರಾರಂಭ ಕೋವಿಡ್-19 ಎಸ್.ಓ.ಪಿ ಕುರಿತು ತರಬೇತಿ ನೀಡಲು ಆಯೋಜಿಸಿದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಇಲಾಖೆಯ ಆಯುಕ್ತರು ವಸತಿ ನಿಲಯಗಳ ಪುನರ್ ಪ್ರಾರಂಭಿಸುವ ಕುರಿತು ಸ್ಪಷ್ಟವಾಗಿ ಎಸ್.ಓ.ಪಿ. ಮಾರ್ಗಸೂಚಿಯನ್ನು ಹೊರಡಿಸಿದ್ದು, ಅದರಂತೆ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು  ಎಂದರು.

ವಸತಿ ನಿಲಯಕ್ಕೆ ಪ್ರವೇಶ ಕಲ್ಪಿಸುವ ಮುನ್ನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಳೆದ 72 ಗಂಟೆ ಅವಧಿಯಲ್ಲಿ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಪ್ರಮಾಣಪತ್ರ ಸಲ್ಲಿಸಬೇಕು. ವಸತಿ ನಿಲಯಕ್ಕೆ ದಾಖಲಾಗುವ ಕುರಿತು ಪೆÇೀಷಕರಿಂದ ಪಡೆದ ಸಮ್ಮತಿ ಪತ್ರ ಸಲ್ಲಿಸುವುದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿದೆ ಎಂದರು.

ವಸತಿ ನಿಲಯಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಸಂಪೂರ್ಣ ವಿವರವನ್ನು ದಾಖಲಿಸಲು ನಿರ್ದಿಷ್ಟ ವಹಿ ಇಡುವುದು ಹಾಗೂ ಸಿಸಿಟಿವಿ ನಿಗಾವಹಿಸಬೇಕು. ವಸತಿ ನಿಲಯದಿಂದ ಶಾಲಾ ಕಾಲೇಜಿಗೆ ಹೋಗಿ ಮರಳಿ ಬರುವಾಗ ಕಡ್ಡಾಯವಾಗಿ ಪ್ರವೇಶದ್ವಾರದಲ್ಲಿ ಥರ್ಮಲ್ ಸ್ಕ್ಯಾನ್ ಮಾಡಿಸಬೇಕು. ಸ್ಕ್ಯಾನ್‍ನಲ್ಲಿ 99.5 ಡಿಗ್ರಿ ಫಾರೆನ್ ಹೀಟ್ ಕಂಡುಬಂದಲ್ಲಿ ತಕ್ಷಣ ತಪಾಸಣೆಗೆ ಒಳಪಡಿಸಿಸಬೇಕು. ಯಾವುದೇ ಕಾರಣಕ್ಕು ಕೋವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳನ್ನು ವಸತಿ ನಿಲಯದಲ್ಲಿ ಇಟ್ಟುಕೊಳ್ಳುವಂತಿಲ್ಲ. ಇಂತಹ ವಿದ್ಯರ್ಥಿಗಳಿಗೆ ಕಡ್ಡಾಯವಾಗಿ ಅಸ್ಪತ್ರೆಗೆ ಶಿಪ್ಟ್ ಮಾಡಿ ನಿಗಾ ವಹಿಸಬೇಕು. ವಸತಿ ನಿಲಯದ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸ್ ಇಟ್ಟು ಬಳಸಲು ವಿದ್ಯಾರ್ಥಿಗಳಿಗೆ ಸೂಚಿಸಬೇಕು ಎಂದರು.

ವಸತಿ ನಿಲಯದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ನಿಲಯದ ಸುತ್ತಮುತ್ತ ಕೊಳಚೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.ಪದೆ-ಪದೇ ಉಪಯೋಗಿಸುವ ಹ್ಯಾಂಡ್ ರೈಲ್, ಡೋರ್ ನಾಬ್, ಮೆಟ್ಟಿಲುಗಳು, ಕಂಪ್ಯೂಟರ್ ಕೀಬೋರ್ಡ್, ಟೆಲಿಫೆÇೀನ್ ಮತ್ತಿತರ ಸಾಮಗ್ರಿಗಳ ಸ್ವಚ್ಛತೆಗೆ ಸಿಬ್ಬಂದಿಗಳು ಗಮನಹರಿಸಬೇಕು. ನಿಲಯದಲ್ಲಿ ಪ್ರೇಯರ್ ಅಸೆಂಬ್ಲಿ ಹಾಗೂ ಕ್ರೀಡಾಕೂಟವನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕು ಎಂದು ರಮೇಶ ಸಂಗಾ ನಿರ್ದೇಶನ ನೀಡಿದರು.

ವಸತಿ ನಿಲಯದಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಕಡ್ಡಾಯವಾಗಿ ಮೂರು ಪದರಗಳ ಕಾಟನ್ ಮಾಸ್ಕ್ ಬಳಸಬೇಕು ಎಂದು ಸ್ಪಷ್ಟಪಡಿಸಿದರು. ಅಡುಗೆ ಕೋಣೆಗಳು ಸ್ವಚ್ಛವಾಗಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ಬಳಸುವ ಹಾಸಿಗೆ-ಹೊದಿಕೆಗಳನ್ನು ಡಿಟರ್ಜೆಟ್ ಪೌಡರ್ ನಿಂದ ತೊಳೆದು ಬಿಸಿಲಿನಲ್ಲಿ ಒಣಗಿಸಿ ಮರು ಬಳಕೆ ಮಾಡಬೇಕು. ತರಕಾರಿ-ಹಣ್ಣುಗಳನ್ನು ನೀರಿನಿಂದ ಸ್ವಚ್ಛವಾಗಿ ತೊಳೆದುಕೊಂಡೆ ಅಡುಗೆಗೆ ಬಳಸಬೇಕು. ಅಡುಗೆ ಪದಾರ್ಥಗಳ ಶೇಖರಣೆ ಕೋಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸಿಬ್ಬಂದಿಗಳಿಗೆ ತಿಳಿಸಿದರು.

ಕಾರ್ಯಾಗಾರದಲ್ಲಿ ವೈದ್ಯ ಡಾ.ಮಲ್ಲರಾವ ಮಲ್ಲೆ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು. ತಾಲೂಕಿನ ವಸತಿ ನಿಲಯಗಳ ಹಿರಿಯ-ಕಿರಿಯ ಮೇಲ್ವಿಚಾರಕರು, ಅಡುಗೆ ಹಾಗೂ ಇತರೆ ಸಹಾಯಕ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here