ಕಲಬುರಗಿ: ನಗರದ ಗುರುಪಾದೇಶ್ವರ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಯಶ್ ಶರ್ಮಾ ರಾಷ್ಟ್ರಮಟ್ಟದ ಐಐಟಿ ಪ್ರವೇಶಾತಿ ಪರೀಕ್ಷೆಯಲ್ಲಿ 1423 ನೇ ರ‍್ಯಾಂಕ್ ಪಡೆದು ದೇಶದ ಅತ್ಯುನ್ನತ ಐಐಟಿ ಮತ್ತು ಎನ್‌ಐಟಿ ಕಾಲೇಜಿನ ಪ್ರವೇಶಾತಿಗೆ ಅರ್ಹತೆ ಪಡೆದಿದ್ದಾನೆ ಎಂದು ಕಾಲೇಜು ಸಂಸ್ಥಾಪಕ ಎಂ.ಬಿ. ಅಂಬಲಗಿ ಅವರು ತಿಳಿಸಿದ್ದಾರೆ.
ಜೆಇಇಯಲ್ಲಿ ಶೇಕಡಾ 99.2 ಅಂಕ ಗಳಿಸಿ ಹೈದ್ರಾಬಾದ್ ಕರ್ನಾಟಕಕ್ಕೆ ಪ್ರಥಮ ಸ್ಥಾನ ಗಳಿಸಿಸಿರುವ ವಿದ್ಯಾರ್ಥಿ, ರಾಜ್ಯದಿಂದ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಯಶ್ ಶರ್ಮಾನ ಸಾಧನೆ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರ್ಕಾರದಿಂದ ವಿಶೇಷ ಬಹುಮಾನದ ಜೊತೆಗೆ ಸಂಸ್ಥೆಯಿಂದ ಗೌರವಿಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ಘೋಷಿಸಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಪಿಯುಸಿ., ಬಿಎಸ್ಸಿ. ಮತ್ತು ಬಿಕಾಂಗೆ ಪ್ರವೇಶ ನೀಡಿ, ಗುಣಮಟ್ಟದ ಶಿಕ್ಷಣ ನೀಡಿ ಉನ್ನತ ಶ್ರೇಣಿಯಲ್ಲಿ ಪಾಸಾಗುವಂತೆ ಸರಿಯಾದ ಮಾರ್ಗದರ್ಶನ ಮಾಡಿರುವ ಕಾರಣಕ್ಕಾಗಿ ಸಂಸ್ಥೆಯಲ್ಲಿ ಪ್ರವೇಶ ಪಡೆದು ಉನ್ನತ ವ್ಯಾಸಂಗಗಳಾದ ಐಐಟಿಗೆ ಪ್ರವೇಶ ಪಡೆಯುತ್ತಿರುವುದು ಒಂದು ನಿದರ್ಶನ. ವಿದ್ಯಾರ್ಥಿಗಳಿಂದ ಯಾವುದೇ ಡೋನೇಶನ್ ಪಡೆಯದೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಲಾಭ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ 9880169907ಗೆ ಸಂಪರ್ಕಿಸಲು ಅವರು ಕೋರಿದ್ದಾರೆ.