ಯುವ ಸಮೂಹಕ್ಕೆ ಸ್ವಾಮಿ ವಿವೇಕಾನಂದ ಆದರ್ಶ: ಲಕ್ಷ್ಮೀಕಾಂತ ಬಿರಾದಾರ ದೇವರ ಗೋನಾಲ

0
24

ಸುರಪುರ: ಸ್ವಾಮಿ ವಿವೇಕಾನಂದರನ್ನು ಭಾರತ ದೇಶ ಮಾತ್ರವಲ್ಲ ಇಡೀ ಜಗತ್ತು ಬಹಳ ಗೌರವಾದರಗಳಿಂದ ನೆನಪಿಸಿಕೊಳ್ಳುತ್ತದೆ. ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಯುವಕರಿಗೆ ಪ್ರೇರಣೆಯಾಗಬೇಕು ಎಂದು ಯುವ ಚಿಂತಕ ಲಕ್ಷ್ಮೀಕಾಂತ ಬಿರಾದಾರ ದೇವರಗೋನಾಲ ಹೇಳಿದರು.

ನಗರದ ರಂಗಂಪೇಟೆಯ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಶುಕ್ರಕವಾರ ಗುರು ಪುಟ್ಟರಾಜ ಜನ ಕಲ್ಯಾಣ ಸೇವಾ ಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಯುವಕ ಯುವತಿಯರಿಗೆ ವಿವೇಕ ವಿಚಾರಧಾರಗಳು ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ನಮ್ಮ ದೇಶದ ಸಾಂಸ್ಕೃತಿಕ ಸಿರಿವಂತಿಕೆಯನ್ನು ಆಧ್ಯಾತ್ಮಿಕ ಸಂದೇಶಗಳ ಮೂಲಕ ಪ್ರಪಂಚಕ್ಕೆ ತೋರಿಸಿ ಭಾರತದ ಘನತೆ ಹೆಚ್ಚಿಸಿದ ಸ್ವಾಮಿ ವಿವೇಕಾನಂದರು ನಮಗೆಲ್ಲ ಸ್ಫೂರ್ತಿ ಮತ್ತು ಆದರ್ಶಪ್ರಾಯರು ಎಂದು ನುಡಿದರು.

Contact Your\'s Advertisement; 9902492681

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸೋಮಶೇಖರ ಶಾಬಾದಿ ಎಲ್ಲ ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶ ಅಳವಡಿಸಿಕೊಳ್ಳಬೇಕು. ಯುವ ಸಮೂಹ ದೀನದಲಿತರ ನೊಂದವರ ಧ್ವನಿಯಾಗುವುದರ ಜತೆಗೆ ಸಹಾಯ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದು ವಿವೇಕಾನಂದರು ಜಗತ್ತಿಗೆ ಸಂದೇಶ ನೀಡಿದ್ದಾರೆ. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದ ಚರಿತ್ರೆ ತಿಳಿದುಕೊಂಡು ಭವಿ? ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಮಹಿಳಾ ಶಕ್ತಿ ಕೇಂದ್ರ ಸಂಯೋಜಕಿ ಬಸವಲಿಂಗಮ್ಮ ಯಾದಗಿರಿ ಮಾತನಾಡಿ ವಿದ್ಯಾರ್ಥಿಗಳು ವಿವೇಕಾನಂದರ ಜೀವನ ಆದರ್ಶಗಳನ್ನು ಅಳವಡಿಸಿ ಕೊಂಡು ದೇಶ, ನಾಡು ಕಟ್ಟುವ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಗೀತ ಯಾದಗಿರಿ, ಟೀಮ್ ರಾಜುಗೌಡ ಗ್ರೌಂಡ್ ವರ್ಕ ಮುಖಸ್ಥ ತಿಗಳಪ್ಪ ಕವಡಿಮಟ್ಟಿ, ಉಪನ್ಯಾಸಕ ಮೌನೇಶ ಹಾವಿನಾಳ ಉಪಸ್ಥಿತರಿದ್ದರು. ಕಾರ್ಯಕ್ರಮ ಪ್ರಾಸ್ತಾವಿಕವಾಗಿ ಸಮಿತಿಯ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ ಮಾತನಾಡಿದರು. ಅಂಬಿಕಾ ಸ್ವಾಗತಿಸಿ ಶಾಂತಾ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here