ದಾಸೋಹ ಪರಂಪರೆಗೆ ಸಿದ್ಧಗಂಗಾ ಶ್ರೀಗಳ ಕೊಡುಗೆ ಅಪಾರ: ಚೆನ್ನಮಲ್ಲಿಕಾರ್ಜುನ ಶ್ರೀ

0
34

ಸುರಪುರ: ದಾಸೋಹ ಪರಂಪರೆ ಪರಿಚಯಿಸುವಲ್ಲಿ ಸಿದ್ಧಗಂಗಾ ಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ ಕೊಡುಗೆ ಅಪಾರವಾಗಿತ್ತು ಎಂದು ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ಶ್ರೀಗಿರಿ ಸಂಸ್ಥಾನ ಮಠದ ಪೂಜ್ಯಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಆಯೋಜಿಸಿದ್ದ ಶಿವಕುಮಾರ ಮಹಾಸ್ವಾಮಿಗಳ ದ್ವಿತೀಯ ವರ್ಷದ ಸಂಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಕನ್ನಡ ನಾಡಿನ ಎಲ್ಲ ಪರಂಪರೆಯ ಮಠಗಳಿಗೂ ಸಿದ್ದಗಂಗಾ ಶ್ರೀಗಳು ಮಾದರಿ ಮತ್ತು ಆದರ್ಶವಾಗಿದ್ದರು. ಬಸವಣ್ಣ ನವರ ನಂತರ ಕಾಯಕ ಸಂಸದೇಶವನ್ನು ದಾಸೋಹ ಪರಂಪರೆಯನ್ನು ನಿಜಾರ್ಥದಲ್ಲಿ ಅನುಷ್ಠಾನಗೊಳಿಸುವ ಮೂಲಕ ಶಿಕ್ಷಣ ದಾಸೋಹ ಮತ್ತು ಸಂಸ್ಕಾರವನ್ನು ಕಲಿಸುವ ಮೂಲಕ ಸದಾ ಕಾಲ ಆದರ್ಶರು ಎಂದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿದ ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಶ್ರೀ ಬಸವರಾಜ ಜಮದ್ರಖಾನಿ ಮಾತನಾಡಿ ಸಿದ್ದಗಂಗಾ ಶ್ರೀಗಳು ಸರಳತೆಯನ್ನು ಮೈಗೂಡಿಸಿಕೊಂಡು ಸದಾ ಕಾಲ ಕಾಯಕ ದಾಸೋಹವನ್ನೇ ಪ್ರತಿಪಾದಿಸಿದರು ಎಂದರು. ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಹಾಗೂ ಸುರಪುರ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಗೂರೇಶ ವಾರದ ಮಾತನಾಡಿದರು.

ಸಾಹಿತಿ ಶರಣಗೌಡ ಪಾಟೀಲ ಜೈನಾಪುರ ಸಿದ್ದಗಂಗಾ ಶ್ರೀಗಳ ಕುರಿತು ಸ್ವರಚಿತ ಕವನ ವಾಚಿಸಿದರು. ಅಧ್ಯಕ್ಷತೆ ವಹಿಸಿದ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಹನುಮಂತಾರಾಯ ದೇವತ್ಕಲ ನಿರೂಪಿಸಿದರು, ಶ್ರೀಕಾಂತ ರತ್ತಾಳ ಪ್ರಾರ್ಥಿಸಿದರು, ಬಲಭೀಮ ಪಾಟೀಲ ಸ್ವಾಗತಿಸಿದರು, ಪ್ರವೀಣ ಜಕಾತಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here