ನಾರಿ ಶಕ್ತಿ ತೋರಿದ ವಿಧ್ಯಾರ್ಥಿನಿಯರು: ಶ್ರೀಮತಿ ವೀರ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ ಕಾರ್ಯಾಗಾರ

0
182

ಕಲಬುರಗಿ : ಕೇವಲ ಎರಡು ನಿಮಿಷದ ಚಲನಚಿತ್ರದಲ್ಲಿ ಅಪಾರ ಅರ್ಥವಿರುವ ಕಥೆ ಹೇಳುವ ಮೂಲಕ ವಿಧ್ಯಾರ್ಥಿನಿಯರು “ನಾರಿಶಕ್ತಿ” ಏನೆಂಬುದನ್ನು ತೋರಿಸಿಕೊಟ್ಟರು.

ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಕಾಲೇಜಿನಲ್ಲಿ ಮನೋಮಯ ಪ್ರೊಡಕ್ಷನ್ಸ್ ನೇತೃತ್ವದಲ್ಲಿ ಜರುಗಿದ ನಾಲ್ಕು ದಿನಗಳ “ಕ್ಯಾಮರಾ ಮತ್ತು ನಟನೆ” ಕುರಿತ ಕಾರ್ಯಾಗಾರದಲ್ಲಿ ವಿಧ್ಯಾರ್ಥಿನಿಯರೇ ಕಥೆ ಬರೆದು , ನಟಿಸಿ , ನಿರ್ದೇಶಿಸಿ , ಕ್ಯಾಮೆರಾ ಬಳಸಿ ನಿರ್ಮಿಸಿದ ನಾಲ್ಕು ಕಿರುಚಿತ್ರಗಳನ್ನು ಶನಿವಾರ ಪ್ರದರ್ಶಿಸಲಾಯಿತು.

Contact Your\'s Advertisement; 9902492681

ವಿ.ಜಿ.ವುಮೆನ್ಸ್ ಕಾಲೇಜಿನ ಕಾಮರ್ಸ್ ಮತ್ತು ಮ್ಯಾನೆಜಮೆಂಟ್ ವಿಭಾಗದಲ್ಲಿ ಏರ್ಪಡಿಸಿದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ನೇತಾಜಿ ಸುಭಾಷ್ಚಂದ್ರ ಬೋಸ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದರು. ಡಾ.ರಾಜೇಂದ್ರ ಕೊಂಡ ಪ್ರಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರಂಗಾಯಣ ನಿರ್ದೇಶಕರಾದ ಪ್ರಭಾಕರ್ ಜೋಶಿ ಮತ್ತು ರೋಟರಿ ಕ್ಲಬ್ ಮಿಡಟಾನ್ ಅಧ್ಯಕ್ಷೆ ಡಾ.ಸುಧಾ ಹಾಲಕಾಯಿ ಮನೋಮಯ ಪ್ರೋಡಕ್ಷನ್ಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೈಭವ್ ಕೇಸ್ಕರ ಭಾಗವಹಿಸಿದ್ದರು. ವಿಭಾಗದ ಮುಖ್ಯಸ್ಥೆ ಉಮಾ ಮಿಣಜಗಿ ರೆಉರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನ್ಯಾಕ್ ಸಂಯೋಜಕಿ ಡಾ.ಫರ್ಜಾನಾ ಜಬೀನ್ , ಐಕ್ಯುಎಸಿ ಕೋ-ಆರ್ಡಿನೇಟರ್ ಡಾ.ಶಿವರಾಜ ಗೌನಳ್ಳಿ , ಡಾ.ಮೀನಾಕ್ಷಿ ಬಾಳಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here