ಅಂಗಡಿ ನಾಮಫಲಕ: ಕನ್ನಡ ಕೈಬಿಟ್ಟರೆ ದಂಡ

0
45

ವಾಡಿ: ಪಟ್ಟಣದಲ್ಲಿರುವ ವಿವಿಧ ಅಂಗಡಿಗಳ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ನಾಮಫಲಕದಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡದಿದ್ದರೆ ಅಂತಹ ಅಂಗಡಿ ಮಾಲೀಕರ ವಿರುದ್ಧ ಕ್ರಮಕೈಗೊಂಡು ದಂಡ ವಿಧಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಹಾದಿಮನಿ, ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಕನ್ನಡ ಬಳಕೆಗೆ ಮೊದಲ ಆಧ್ಯತೆ ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ. ನಗರದಲ್ಲಿ ಬಹುತೇಕ ಅಂಗಡಿಗಳ ನಾಮಫಲಕಗಳು ಆಂಗ್ಲ ಭಾಷೆಯಿಂದ ಕೂಡಿವೆ. ಇಂತಹ ಫಲಕಗಳಲ್ಲಿ ಕನ್ನಡಕ್ಕೆ ತೃತೀಯ ದರ್ಜೆಯ ಸ್ಥಾನಮಾನ ನೀಡಿರುವುದು ಕಂಡುಬಂದಿದೆ. ಇದು ನಿಯಮ ಬಾಹೀರವಾಗಿದೆ.

Contact Your\'s Advertisement; 9902492681

ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ಕನ್ನಡಿಗರೇ ಕನ್ನಡವನ್ನು ನಿರ್ಲಕ್ಷ್ಯದಿಂದ ಕಾಣುವುದು ಸಲ್ಲ. ಪರಿಣಾಮ ವ್ಯಾಪಾರಿಗಳು ಕೂಡಲೇ ಅಂಗಡಿ ನಾಮಫಲಕಗಳನ್ನು ಬದಲಿಸಬೇಕು. ನಾಮಫಲಕದಲ್ಲಿ ಕನ್ನಡ ಅಕ್ಷರಗಳಿಗೆ ಮೊದಲ ಪ್ರಾಶಸ್ಥ್ಯ ನೀಡಬೇಕು. ಉಳಿದಂತೆ ಇತರ ಭಾಷೆಗಳನ್ನು ಕಿರಿದಾಗಿ ನಮೂದಿಸಬಹುದು. ನಾಮಫಲಕ ಬದಲಾವಣೆಗೆ ಫೆ.೧೫ರ ವರೆಗೆ ಅವಕಾಶ ನೀಡಲಾಗುತ್ತದೆ. ನಂತರವೂ ಅಂಗಡಿ ವ್ಯಾಪಾರಿಗಳು ಎಚ್ಚೆತ್ತುಕೊಳ್ಳದ್ದರೆ ದಂಡ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here