ಸುರಪುರ: ತಾಲೂಕಿನ ದೇವಿಕೆರಾ ಗ್ರಾಮದಲ್ಲಿ ಹಾಕಲಾಗಿರುವ ಡಾ: ಬಾಬು ಜಗಜೀವನರಾಂ ಅವರ ನಾಮಫಲಕವನ್ನು ತೆರವುಗೊಳಿಸುವಂತೆ ಆದೇಶ ಮಾಡಿದ್ದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನಗರದ ತಹಸೀಲ್ ಕಚೇರಿ ಮುಂದೆ ಸಾಮೂಹಿಕ ಸಂಘಟನೆಗಳಿಂದ ಸಾಂಕೇತಿಕ ಧರಣಿ ನಡೆಸಲಾಯಿತು.
ಧರಣಿಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ, ತಾಲೂಕಿನ ದೇವಿಕೆರಾ ಗ್ರಾಮದಲ್ಲಿ ಹಾಕಲಾಗಿರುವ ಡಾ:ಬಾಬು ಜಗಜೀವನರಾಂ ಅವರ ನಾಮಫಲಕವನ್ನು ತೆರವುಗೊಳಿಸುವಂತೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶ ಮಾಡಿದ್ದು ಅಲ್ಲದೆ ನಾಮಫಲಕ ತೆರವುಗೊಳಿಸಲು ಮುಂದಾಗಿರುವ ದೇವಿಕೆರಾ ಗ್ರಾಮ ಪಂಚಾಯತಿ ಅಭೀವೃಧ್ಧಿ ಅಧಿಕಾರಿ ಇವರನ್ನು ಕೂಡಲೇ ಅಮಾನತ್ತು ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ಡಾ:ಬಾಬು ಜಗಜೀವನರಾಂ ಅವರ ನಾಮಫಲಕವನ್ನು ತೆರವುಗೊಳಿಸಬಾರದು,ಒಂದು ವೇಳೆ ನಾಮಫಲಕ ತೆರವುಗೊಳಿಸಿದಲ್ಲಿ ರಾಜ್ಯಾದ್ಯಂತ ಮಾದಿಗ ಸಂಘಟನೆಗಳ ಸಾಮೂಹಿಕ ವೇದಿಕೆಯಿಂದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ಅಲ್ಲದೆ ಅಕ್ಟೋಬರ್ ೧೦ ರಂದು ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಯಾವುದೇ ನಿರ್ಣಯವನ್ನು ಕೈಗೊಂಡಿಲ್ಲ ಆದರೂ ನಾಮಫಲಕ ತೆರವುಗೊಳಿಸಲು ಅಧಿಕಾರಿಗಳು ಮುಂದಾಗುವ ಮೂಲಕ ಗ್ರಾಮದ ಜನರಲ್ಲಿ ಅಶಾಂತಿ ಉಂಟು ಮಾಡಲಾಗುತ್ತಿದೆ,ಆದ್ದರಿಂದ ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ನಾಮಫಲಕ ತೆರವುಗೊಳಿಸುವುದನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಭೀಮಾಶಂಕರ ಬಿಲ್ಲವ್ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ದಾನಪ್ಪ ಕಡಿಮನಿ ಹಣಮಂತ ಬಿಲ್ಲವ್ ದೇವಿಕೇರಿ ಭೀಮರಾಯ ಕಡಿಮನಿ ನಾಗರಾಜ ಓಕಳಿ ತಿಮ್ಮಣ್ಣ ಬಿಲ್ಲವ್ ದುರ್ಗಪ್ಪ ನಾಗರಾಳ ಹಣಮಂತ ಗೋನಾಲ ಮಲ್ಲಿಕಾರ್ಜುನ ಮಂದಾಲಿ ಮರೆಪ್ಪ ದೇವಾಪುರ ಬಲಭೀಮ ದೊಡ್ಮನಿ ಭೀಮರಾಯ ಬಹುಲಕಲ್ ಮಾನಪ್ಪ ಹುಲಕಲ್ ಮಾರ್ಥಂಡಪ್ಪ ದೇವರಗೋನಾಲ ಜಟ್ಟೆಪ್ಪ ಸತ್ಯಂಪೇಟೆ ದುರ್ಗಪ್ಪ ರುಕ್ಮಾಪುರ ಮಾನಪ್ಪ ರುಕ್ಮಾಪುರ ನಾಗರಾಜ ಕಕ್ಕೇರಾ ಪವಡೆಪ್ಪ ಕಕ್ಕೇರಾ ಸೋಮು ಕಕ್ಕೇರಾ ಸೇರಿದಂತೆ ಅನೇಕರಿದ್ದರು.